Online Marriage: ಕೆಲವು ದಿನಗಳಿಂದ ಉತ್ತರ ಭಾರತದ ಹಲವು ಭಾಗಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಇದರಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನು ಹಿಮಾಚಲ ಪ್ರದೇಶದಲ್ಲಿ ಬಿಟ್ಟು ಬಿಡದೇ ಸತತ ಮೂರು ದಿನಗಳಿಂದ ಮಳೆ ಸುರಿಯುತ್ತಲೇ ಇದೆ. ಭೂಕುಸಿತ, ಮಳೆ ಹಾನಿ, ಪರಿಣಾಮ ಮೂವತ್ತಕ್ಕು ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಈ ಸುರಿಯುತ್ತಿರುವ ಮಳೆಯಲ್ಲಿಯೇ ಹಿಮಾಚಲ ಪ್ರದೇಶದ ಕುಟುಂಬವೊಂದು ಮನೆಯಿಂದ ಹೊರಗೆ ಬರದೇ ಮನೆಯಲ್ಲೇ ಕುಳಿತು ವಿಡಿಯೋ ಕಾಲ್ ಮೂಲಕ ಮದುವೆ ಮಾಡಿದ್ದಾರೆ.
ಶಿಮ್ಲಾದ ಕೊಟ್ ಗಢನಿಂದ ಶಿವಾನಿ ಹಾಗೂ ಆಶಿಶ್ ಅವರ ಮದುವೆ ಅದ್ದೂರಿಯಾಗಿ ನಡೆಯಬೇಕಿತ್ತು. ಇದಕ್ಕಾಗಿ ಸಕಲ ಸಿದ್ದತೆಗಳು ಮಾಡಿಕೊಂಡಿದ್ದರು. ಆದರೆ ಮಳೆಯಿಂದಾಗಿ ಎಲ್ಲವೂ ಯಡವಟ್ಟಾಗಿದೆ. ಆದರೆ ಫಿಕ್ಸ್ ಆಗಿರುವ ಡೇಟ್ ಮುಂದಕ್ಕೆ ಹಾಕೋದು ಒಳ್ಳೇದು ಅಲ್ಲ ಎಂದು ಮನೆಯಲ್ಲಿಯೇ ವಿಡಿಯೋ ಕಾಲ್ ಮೂಲಕ ಮದುವೆಯನ್ನ್ ಮಾಡಿದ್ದಾರೆ.