ಮೆಟ್ರೋದಲ್ಲಿ (Metro) ಒಂದಲ್ಲ ಒಂದು ರೀತಿಯ ಘಟನೆಗಳು ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದೆ. ಅದೇನಪ್ಪ ಅಂದ್ರೆ ಮೆಟ್ರೋ ರೈಲಿನಲ್ಲಿ ಇಬ್ಬರು ಮಹಿಳೆಯರು ಚಪ್ಪಲಿ ಹಿಡಿದುಕೊಂಡು ಕಿತ್ತಾಡಿದ್ದಾರೆ. ಇದೀಗ ಈ ವಿಡಿಯೋ ಸಖತ್ ವೈರಲ್ (Viral Video)ಆಗುತ್ತಿದೆ. ಈ ಘಟನೆ ನಡೆದಿರೋದು ದೆಹಲಿ ಮೆಟ್ರೋ ರೈಲಿನಲ್ಲಿ.
ಈ ವಿಡಿಯೋದಲ್ಲಿ ಕ್ಲೀಯರ್ ಆಗಿ ಕಾಣುತ್ತೆ, ಮಹಿಳೆಯೊಬ್ಬರು ತಮ್ಮ ಕೈಯಲ್ಲಿ ಚಪ್ಪಲಿ ಹಿಡಿದುಕೊಂಡಿದ್ದಾರೆ. ಇನ್ನೊಬ್ಬ ಮಹಿಳೆ ಸ್ಟೀಲ್ ಬಾಟಲಿ ಹಿಡಿದುಕೊಂಡಿದ್ದಾರೆ. ಜೊತೆಗೆ ಇದ್ದ ಇನ್ನೀತರ ಮಹಿಳೆಯರು ಜಗಳ ಬಿಡಿಸಲು ಹರಸಾಹಸ ಪಡ್ತಾ ಇದ್ದಾರೆ. ಆದರೆ ಜಗಳವಾಡೋದ್ರಲ್ಲಿ ಎಷ್ಟು ಬ್ಯೂಸಿ ಆಗಿದ್ದಾರೆ ಅಂದ್ರೆ ಬೇರೊಬ್ಬರ ಮಾತು ಕೇಳುವಷ್ಟು ವ್ಯವಧಾನ ಆ ಮಹಿಳೆಯರಿಗಿಲ್ಲ.
ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಇದರಿಂದ ಕೋಪಗೊಂಡ ಒಬ್ಬ ಮಹಿಳೆ ಬಾಟಲಿಯಲ್ಲಿದ್ದ ನೀರನ್ನು ಎರಚಿದ್ದಾಳೆ. ಈ ವಿಡಿಯೋವನ್ನು ದೀಪಿಕಾ ಭಾರದ್ವಾಜ್ ಎನ್ನುವ ಮಹಿಳೆ ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಶೇರ್ ಮಾಡಿದ್ದಾರೆ. ವಿಡಿಯೋ ನೋಡಿದ ಜನರು ಇದನ್ನು ಶೇರ್ ಮಾಡ್ತಾ ಇದ್ದಾರೆ. ಅಷ್ಟೇ ಅಲ್ಲ ಕಮೆಂಟ್ ಕೂಡ ಮಾಡ್ತಾ ಇದ್ದಾರೆ. ಇನ್ನು ಕೆಲವರು ಈ ಹಿಮ್ದೆ ಮೆಟ್ರೋದಲ್ಲಿ ನಡೆದ ಘಟನೆಗಳನ್ನು ನೆನೆಸುಕೊಳ್ಳುತ್ತಾ ಕಮೆಂಟ್ ಮಾಡ್ತಾ ಇದ್ದಾರೆ.