Gujarat: ಬೀದಿ ನಾಯಿಗಳು ಎರಡು ವರ್ಷದ ಮಗುವನ್ನ್ ಕಚ್ಚಿ ಕೊಂದ ಘಟನೆ ಗುಜರಾತ್ ನಲ್ಲಿ ನಡೆದಿದೆ. ಗುಜರಾತ್ ನ ಮೊರ್ಬಿ ನಗರದ ಮೆಟಲ್ ರಸ್ತೆಯಲ್ಲಿರುವ ಸೆರಾಮಿಕ್ ಕಾರ್ಖಾನೆಯ ಬಳಿ ಈ ಘಟನೆ ನಡೆದಿರೋದು. ಎರಡು ದಿನಗಳ ಹಿಂದೆ ಕಾರ್ಖಾನೆಯ ಬಳಿ ಕುಟುಂಬವೊಂದು ಕೆಲಸ ಮಾಡುತ್ತಿತ್ತು. ಕೆಲಸ ಮಾಡುವ ಸ್ಥಳದಲ್ಲಿಯೇ ತಮ್ಮ ಎರಡು ವರ್ಷದ ಮಗುವನ್ನು ಆಟವಾಡಲು ಬಿಟ್ಟಿದ್ದರು. ಅದೇ ಸಮಯಕ್ಕೆ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ಮಗುವನ್ನು ಕಚ್ಚಿ ಎಳೆದಾಡಿವೆ. ಗಂಭೀರವಾಗಿ ಗಾಯಗೊಂಡ ಮಗುವನ್ನು ವಾಂಕನೇರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ.
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಬೀದಿ ನಾಯಿಗಳ ಕಡಿತದಿಂದ ಮಾನವನ ದೇಹಕ್ಕೆ ಅಪಾಯಕಾರಿ ಬ್ಯಾಕ್ಟೀರಿಯಾಗಳು ಹರಡಲಿದ್ದು, ಚಿಕಿತ್ಸೆ ನೀಡದಿದ್ದಾಗ ಕೆಲವೊಮ್ಮೆ ಮಾರಣಾಂತಿಕ ಸೋಂಕಿಗೆ ಕಾರಣವಾಗಬಹುದು.