Madhya Pradesh: ಒಂದು ಬಾರಿ ಹಾವು ಕಚ್ಚಿದರೇ ಸರಿಯಾದ ಟ್ರಿಟ್ ಮೆಂಟ್ ಸಿಗದೇ ಇದ್ದಾಗ ಬದುಕುವುದೇ ಕಷ್ಟ. ಅಂತದ್ರಲ್ಲಿ ಇಲ್ಲೊಬ್ಬ ಮಹಿಳೆಗೆ ವರ್ಷದಲ್ಲಿ ಬರೋಬ್ಬರಿ 12 ಬಾರಿ ಹಾವು ಕಚ್ಚಿದೆ. ಯಸ್, ಮಧ್ಯಪ್ರದೇಶದ ಮಂಡ್ಲಾ ಜಿಲ್ಲೆಯಲ್ಲಿರುವ ಮಹಿಳೆಯೊಬ್ಬರಿಗೆ ಹಾವೊಂದು 12 ಬಾರಿ ಕಚ್ಚಿದೆಯಂತೆ. ಮಹಿಳೆ ಹೋದಲ್ಲೆಲ್ಲ ಹಾವುಗಳು ಬೆನ್ನಟ್ಟುತ್ತವೆಯಂತೆ. ಮನೆಯ ಒಳಗೆ ಇದ್ದರೂ ಬಿಡೋದಿಲ್ಲ, ಮನೆಯಿಂದ ಹೊರಗೆ ಬಂದರೂ ಬಿಡೋದಿಲ್ಲ. ಮನೆಯಿಂದ ಹೊರಗೆ ಬಂದರೆ ಸಾಕು ಬೆನ್ನು ಹತ್ತಿ ಕಚ್ಚುತ್ತವೆಯಂತೆ ಅಂತಾರೆ ಮಹಿಳೆ.
ಈ ಮಹಿಳೆಗೆ ಒಂದೇ ವರ್ಷದಲ್ಲಿ 12 ಬಾರಿ ಹಾವು ಕಚ್ಚಿದೆ ಅಂದ್ರೆ ನಂಬೋದು ಅಸಾಧ್ಯ. ಆದ್ರೆ ಇದು ಸತ್ಯ. ನಾಗರಹಾವು, ಕರಿ ನಾಗರ, ಕೊಳಕು ಮಂಡಲದಂತಹ ಹಾವುಗಳು ಕಚ್ಚಿದ್ದಾವಂತೆ. ಈ ಮಹಿಳೆ ಹೇಳೋ ಪ್ರಕಾರ ಹಿರಿಯರ ಕಾಲದಿಂದಲೂ ನಾಗಾರಾಧನೆ ಮಾಡುತ್ತಾ ಬಂದಿದ್ದೇವೆ. ಆದರೂ ಹಾವುಗಳು ನನ್ನನ್ನು ಯಾಕೆ ಕಚ್ಚುತ್ತಾವೋ ಗೊತ್ತಿಲ್ಲ. ಹಿಂಬಾಲಿಸಿ ಬಂದು ಕಚ್ಚುತ್ತಾವೆ.
ಸಾಕಷ್ಟು ಪೂಜೆಗಳನ್ನು ಮಾಡಿದ್ದಾರೆ ಆದರೂ ಪ್ರಯೋಜನವಾಗಿಲ್ಲ. ಇದರಿಂದ ಮಹಿಳೆ ಹಾಗೂ ಆಕೆಯ ಗಂಡ ಇಬ್ಬರೂ ರೋಸಿ ಹೋಗಿದ್ದಾರೆ. ಹಾವು ಕಚ್ಚಿದ ತಕ್ಷಣ ಮಹಿಳೆ ಆಸ್ಪತ್ರೆಗೆ ಹೋಗುತ್ತಾಳೆ. ಸೂಕ್ತ ಚಿಕಿತ್ಸೆ ಪಡೆದು ಮರಳಿ ಬರುತ್ತಾಳೆ. ಆದರೂ ಮನುಷ್ಯನಿಗೆ ಇಷ್ಟೊಂದು ಬಾರಿ ಹಾವುಗಳು ಕಚ್ಚಿರೋ ಸಂಗತಿ ಕೇಳಿದ್ರೆ ವಿಚಿತ್ರ ಅನ್ನಿಸುತ್ತದೆ.