Ginger Price Hike: ಟೊಮೆಟೊ (Tomato) ಬೆಲೆ ಹೆಚ್ಚಾಗಿದ್ದು ಇನ್ನು ಜನರಿಗೆ ಅರಗಿಸಿಕೊಳ್ಳಲು ಆಗಿಲ್ಲ. ಅಷ್ಟರಲ್ಲೇ ಶುಂಠಿ (Ginger) ಬೆಲೆ ಕೂಡ ಗಗನಕ್ಕೇರಿದೆ. ಹೌದು ಮಾರುಕಟ್ಟೆ ಇತಿಹಾಸದಲ್ಲೇ ಮೊದಲ ಬಾರಿಗೆ 100 ಕೆ.ಜಿ ಶುಂಠಿಗೆ 18 ರಿಂದ 20 ಸಾವಿರಕ್ಕೆ ಏರಿದೆ. ಕಳೆದ ವರ್ಷ ಶುಂಠಿಯ ಬೆಲೆ 100 ಕೆ.ಜಿ ಗೆ 900 ರಿಂದ 1200 ರೂಪಾಯಿ ಇತ್ತು. ಇದೀಗ ಶುಂಠಿಯ ಬೆಲೆ ನೂರು ಕೆ.ಜಿಗೆ 18 ಸಾವಿರದಿಂದ 20 ಸಾವಿರದವರೆಗೆ ಆಗಿದೆ. ಈ ಬೆಲೆ ಬಂದಿರೋದು ರೈತರಿಗೆ ಜಾಕ್ ಪಾಟ್ ಹೊಡೆದಂತೆ ಆಗಿದೆ.
ಕಳೆದ ವರ್ಷ ಶುಂಠಿಯನ್ನು ಜೊಲದಲ್ಲೇ ಉಳಿಸಿಕೊಂಡವರಿಗೆ ಇದೊಂದು ಜಾಕ್ ಪಾಟ್. ಉತ್ತರ ಭಾರತದಲ್ಲಿ ಶುಮ್ಠಿಯನ್ನು ಹೆಚ್ಚಾಗಿ ಬಳಸುತ್ತಾರೆ. ಲೆಕ್ಕದ ಪ್ರಕಾರ ಒಂದು ಎಕರೆ ಶುಂಠಿ ಬೆಳೆದರೆ ಸರಿಸುಮಾರು 25 ಲಕ್ಷ ಲಾಭ ಬರಲಿದೆ.
ಸಾಮಾನ್ಯವಾಗಿ ರೈತರು ಶುಂಠಿಯನ್ನು ಜನೇವರಿ ತಿಂಗಳಿನಲ್ಲಿಯೇ ಮಾರಿರುತ್ತಾರೆ. ಯಾಕೆಂದ್ರೆ ಏಪ್ರೀಲ್ ಹಾಗೂ ಮೇ ತಿಂಗಳಿನಲ್ಲಿ ಶುಂಠಿ ಬಿತ್ತನೆ ಮಾಡ್ತಾರೆ. ಈ ಶುಂಠಿ ಕೈಗೆ ಬರೋದು ಜನೇವರಿಯಲ್ಲಿ. ಈಗಾಗಲೇ ಶುಂಠಿ ಮಾರಿದ ರೈತರಿಗೆ ಈಗ ಬಂದಿರೋ ಬೆಲೆ ಲಾಸ್ ಆದಂತೆ. ಆದರೆ ಮಾರದೇ ಏನಾದ್ರು ರೈತರು ಶುಂಠಿ ಇಟ್ಟಿದ್ದರೇ ಅಂತಹ ರೈತರಿಗೆ ನಿಜಕ್ಕೂ ಜಾಕ್ ಪಾಟ್ ಹೊಡೆದಂತೆ.