ರಾಜ್ಯದಲ್ಲಿ 28 ಜಿಲ್ಲೆಗಳಲ್ಲಿ ಮಳೆಯೇ ಇಲ್ಲದ ಕಾರಣ ಬರಗಾಲದ ಮುನ್ಸೂಚನೆ ಸಿಕ್ತಿದೆ. 28 ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದ ಮಳೆಯಾಗಿದ್ದು, ರೈತರು ಕಂಗಾಲಾಗಿದ್ದಾರೆ. ಕಳೆದ ತಿಂಗಳಿನಲ್ಲಿ 56% ಮಳೆಯ ಕೊರತೆಯಾಗಿತ್ತು. ಈ ತಿಂಗಳ ಮೊದಲ 11 ದಿನ 34% ಮಾತ್ರ ಮಳೆಯಾಗಿದೆ. ಉತ್ತರ ಒಡನಾಡಿನಲ್ಲಿ 55% ಮಳೆ ಕಡಿಮೆಯಾಗಿದ್ದು, ದಕ್ಷಿಣ ಒಳನಾಡಿನಲ್ಲಿ 18% ಮಳೆ ಕಡಿಮೆಯಾಗಿದೆ ಹಾಗೂ ಉತ್ತರ ಒಳನಾಡಿನಲ್ಲಿ 13 ಜಿಲ್ಲೆಗಳಲ್ಲಿ ಮಳೆಗೆ ಬರ ಬಂದಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ಅತೀ ಹೆಚ್ಚು ಅಂದ್ರೆ 77% ಮಳೆಯ ಕೊರತೆಯಾಗಿದೆ. ಮಲೆನಾಡಿನಲ್ಲಿ ವಾಡಿಕೆಗಿಂತ 74% ಮಳೆ ಕಡಿಮೆ ಬಿದ್ದಿದೆ. ಇದರಲ್ಲಿ ಮೂರು ಜಿಲ್ಲೆಯಲ್ಲಿ ಮಳೆ ಕೊರತೆ ಕಾಡುತ್ತಿದೆ. ಹವಾಮಾನ ಇಲಾಖೆ ರಾಜ್ಯದ ಬಹುತೇಕ ಕಡೆ ಮುಂದಿನ ನಾಲ್ಕು ದಿನ ಮಳೆಯ ಮುನ್ಸೂಚನೆ ನೀಡಿದೆ. ಅದರಲ್ಲೂ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಆಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

