ಕಳೆದ ತಿಂಗಳಿನಿಂದ ಟೊಮೆಟೊ (Tomato) ಬೆಲೆ ಸಡನ್ ಆಗಿ ಜಂಪ್ ಆಗಿತ್ತು. ಕೆ.ಜಿ ಗೆ 100 ರಿಂದ 120 ರೂಪಾಯಿ ಆಗಿತ್ತು. ಬಟ್ ಇದೀಗ ಟೊಮೆಟೊ ಬೆಲೆ ಕೊಂಚ ಮಟ್ಟಿಗೆ ಕಡಿಮೆಯಾಗಿದೆ. ಹೌದು, ಕೆ.ಜಿ ಗೆ 40 ರೂ ಗೆ ಇಳಿದಿದೆ. ಅಂದ್ರೆ 60% ರಷ್ಟು ಇಳಿಕೆ ಕಂಡಿದೆ.
ಮುಂಗಾರು ಮಳೆಯ ಹಿನ್ನೆಲೆ ಟೊಮೆಟೊ ಉತ್ಪಾದನದಲ್ಲಿ ಹೆಚ್ಚಳ ಕಂಡಿದೆ. ಕೋಲಾರ, ಬಾಗೇಪಲ್ಲಿ, ಚಿಂತಾಮಣಿ ಸುತ್ತ ಮುತ್ತಲಿನ ಏರಿಯಾದಿಂದ ಟೊಮೆಟೊ ಪೂರೈಕೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಟೊಮೆಟೊ ಟ್ರೇಡರ್ಸ್ ಅಸೊಸಿಯೇಶನ್ ಅಧ್ಯಕ್ಷ ಅಶೋಕ್ ಕೌಶಿಕ್ ತಿಳಿಸಿದ್ದಾರೆ. ಬಿಸಿಗಾಳಿ ಹಾಗೂ ತಾಪಮಾನ ಏರಿಕೆಯ ಪರಿಣಾಮ ಕೆಳೆದ ಮೇ-ಜೂನ್ ನಲ್ಲಿ ಟೊಮೆಟೊ ಉತ್ಪಾದನೆ ಕುಸಿದಿತ್ತು. ಇದರ ಪರಿಣಾಮ ಬೆಲೆಯಲ್ಲಿ ಭಾರಿ ಇಳಿಕೆ ಕಂಡಿದೆ.