ಟೊಮೆಟೊ (Tomato)ಬೆಲೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಟೊಮೆಟೊಗೆ ಚಿನ್ನದ ಬೆಲೆಯಾಗುತ್ತಿದೆ. ಇಂತದ್ದರಲ್ಲಿ ಇಲ್ಲೊಬ್ಬ ದಂಪತಿ ತಮ್ಮ ಮಗಳಿಗೆ ಟೊಮೆಟೊದಲ್ಲಿ ತುಲಾಭಾರ ಮಾಡಿಸಿದ್ದಾರೆ. ಇದೀಗ ಈ ಘಟನೆ ಎಲ್ಲೆಡೆ ವೈರಲ್ ಆಗುತ್ತಿದೆ.
ಸಹಜವಾಗಿ ಅಕ್ಕಿ, ಬೆಲ್ಲ, ಬೇಳೆ, ತೆಂಗಿನಕಾಯಿಯ ತುಲಾಭಾರ ಕೇಳಿದ್ದೇವೆ. ಆದರೆ ಇದೇ ಮೊದಲು ಟೊಮೆಟೊ ತುಲಾಭಾರ ಮಾಡಿರುವುದನ್ನು ನೋಡಿದ್ದೇವೆ. ಟೊಮೆಟೊದಲ್ಲಿ ತುಲಾಭಾರ ಮಾಡಿರುವುದು ಕೇಳೋದಕ್ಕೆ ಅಚ್ಚರಿ ಅನ್ನಿಸುತ್ತದೆ. ಈ ಘಟನೆ ನಡೆದಿರೋದು ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯಲ್ಲಿ. ಮಲ್ಲ ಜಗ್ಗ ಅಪ್ಪಾರಾವ್ ಮತ್ತು ಮೋಹಿನಿ ದಂಪತಿಯ ಪುತ್ರಿ ಭವಿಷ್ಯಾ ಅವರಿಗೆ ಟೊಮೆಟೊ ತುಲಾಭಾರ ಮಾಡಿಸಿದ್ದಾರೆ. ಈ ತುಲಾಭಾರ ನಡೆದಿರೋದು ನೂಕಾಲಮ್ಮ ದೇವಸ್ಥಾನದಲ್ಲಿ.
ತುಲಾಭಾರಕ್ಕೆ ಬರೋಬ್ಬರಿ 50 ಕೆ.ಜಿ ಟೊಮೆಟೊ ಇಡಲಾಗಿತ್ತು. ಇದರ ಜೊತೆಗೆ ಬೆಲ್ಲ್ ಹಾಗೂ ಸಕ್ಕರೆ ಸಹ ಇತ್ತು. ತುಲಾಭಾರಕ್ಕೆ ಬಳಸಲಾದ ಟೊಮೆಟೊ, ಬೆಲ್ಲ ಹಾಗೂ ಸಕ್ಕರೆ ದೇವಸ್ಥಾನದಲ್ಲಿ ನಡೆಯುವ ಅನ್ನದಾಸೋಹಕ್ಕೆ ಬಳಸಲಾಗುವುದು.
ಒಂದು ಕಡೆ ತುಲಾಭಾರ ನಡೆಯುತ್ತಿದ್ದರೆ, ಮತ್ತೊಂದು ಕಡೆ ದೇವಸ್ಥಾನಕ್ಕೆ ಬಂದಿದ್ದ ಭಕ್ತರು ಆಶರ್ಯದಿಂದ ನೋಡುತ್ತ ನಿಂತಿದ್ದರು. ಏನಪ್ಪಾ ಇವ್ರು ಟೊಮೆಟೊ ಬೆಲೆ ಕೆ.ಜಿಗೆ 120 ಆಗಿದೆ. ಅಂತದ್ದರಲ್ಲಿ ತುಲಾಭಾರ ಮಾಡುತ್ತಿದ್ದಾರೆ ಅಂತ ಆಶ್ಚರ್ಯದಿಂದ ನೋಡುತ್ತ ನಿಂತಿದ್ದರು.