ಹಾಲಿವುಡ್ (Hollywood) ಖ್ಯಾತ ನಟ ಕಿಲಿಯನ್ ಮರ್ಫಿ (Cilian Murphy) ತಮ್ಮ ಚಿತ್ರಕ್ಕಾಗಿ ಭಗವದ್ಗೀತೆ (Bhagavadgita) ಓದಿದ್ದಾರೆ. ತಮ್ಮ ಪಾತ್ರದ ಸಿದ್ದತೆಗಾಗಿ ಭಗವದ್ಗೀತೆ ಓದಿದ್ದಾರಂತೆ. ಹಾಲಿವುಡ್ ಖ್ಯಾತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ (christopher nolan) ನಿರ್ದೇಶನದ ‘ಆಪನ್ ಹೈಮರ್’ ಸಿನಿಮಾದ ನಟ ಈ ಕಿಲಿಯನ್ ಮರ್ಫಿ. ಈ ಸಿನಿಮಾ ಜುಲೈ 21ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈ ಸಿನಿಮಾಗೆ ಈಗಾಗಲೇ ಭರ್ಜರಿ ಪ್ರಚಾರ ಕೂಡ ನಡೆದಿದೆ. ಅಣು ಬಾಂಬ್ ಕಂಡು ಹಿಡಿದ ಜೆ. ರಾಬರ್ಟ್ ಆಪನ್ ಹೈಮರ್ ಅವರ ಬದುಕನ್ನು ಆಧರಿಸಿದ ಸಿನಿಮಾ ಇದಾಗಿದೆ.
ಭಗವದ್ಗೀತೆಯಲ್ಲಿ ಒಟ್ಟು 18 ಅಧ್ಯಾಯಗಳಿವೆ. ಕೇವಲ ಭಾರತ ಮಾತ್ರವಲ್ಲ ವಿದೇಶದಲ್ಲೂ ಇದರಿಂದ ಪ್ರಭಾವಿತರಾಗಿದ್ದಾರೆ. ‘ಆಪನ್ ಹೈಮರ್’ ಸಿನಿಮಾದಲ್ಲಿ ಚಾಲೆಂಜಿಂಗ್ ರೋಲ್ ಇದೆ. ನೀವು ಹೇಗೆ ತಯಾರಿ ನಡೆಸಿದ್ದೀರಾ ಎಂದು ಕೇಳಿದ ಪ್ರಶ್ನೇಗೆ ಉತ್ತರಿಸುತ್ತ ತಯಾರಿ ವೇಳೆ ಭಗವದ್ಗೀತೆ ಓದುತ್ತಿದ್ದೆ. ನಿಜಕ್ಕೂ ಸ್ಫೂರ್ತಿದಾಯಕವಾಗಿದೆ. ಭಗವದ್ಗೀತೆ ಜೀವನದುದ್ದಕ್ಕೂ ಬಹಳಷ್ಟು ಸಾಂತ್ವಾನ ನೀಡಿದೆ ಎಂದು ಹೇಳಿಕೊಂಡಿದ್ದಾರೆ.
ಇನ್ನೊಂದು ಅಚ್ಚರಿಯ ವಿಚಾರ ಅಂದ್ರೆ ಆಪನ್ ಹೈಮರ್ ಸಂಕ್ಸೃತ ಕಲಿತಿದ್ದರು. ಅವರು ಕೂಡ ಭಗವದ್ಗೀತೆ ಓದಿದ್ದರಂತೆ.