ಹಾವಾಡಿಗನೊಬ್ಬ ಉದ್ಯಮಿಗೆ ಹಾವು ಕಚ್ಚಿಸಿ ಕೊಲೆ ಮಾಡಿ ನಂತರ ಪೊಲೀಸರ ಅತಿಥಿಯಾಗಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ. ಈ ಬಗ್ಗೆ ಇನ್ನೂ ನಾಲ್ಕು ಜನರ ವಿರುದ್ದ ಪ್ರಕರಣ ದಾಖಲಾಗಿದೆ. ಉತ್ತರ ಪ್ರದೇಶದ ಹಾವಾಡಿಗ ರಮೇಶ್ ನಾಥ್ ಎಂಬಾತ ಬಂಧಿತ ಆರೋಪಿ.
ಜು.15 ರಂದು ತೀನ್ ಪಾನಿ ಪ್ರದೇಶದ ಬಳಿ 30 ವರ್ಷದ ಅಂಕಿತ್ ಚೌಹಾಣ್ ಎಂಬಾತನ ಶವ ಕಾರಿನೊಳಗೆ ಪತ್ತೆಯಾಗಿತ್ತು. ಆತನ ದೇಹವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಸಾವಿಗೆ ಕಾರಣ ಹಾವಿನ ವಿಷದಿಂದ ಅನ್ನೋದು ತಿಳಿದು ಬಂದಿದೆ. ಮೃತನ ಮೊಬೈಲ್ ಫೋನ್ ಪರಿಶೀಲನೆ ಮಾಡಿದಾಗ ಡಾಲಿ ಎಂಬ ಮಹಿಳೆಯೊಂದಿಗೆ ಸಂಪರ್ಕದಲ್ಲಿರುವುದು ಪತ್ತೆಯಾಗಿದೆ. ನಂತರ ಆ ಮಹಿಳೆ ಜಾಡು ಹಿಡಿದು ಪರಿಶೀಲನೆ ನಡೆಸಿದಾಗ, ಆಕೆ ಹಾವಾಡಿಗನನ್ನು ಭೇಟಿ ಮಾಡಿರುವುದು ಬೆಳಕಿಗೆ ಬಂದಿದೆ.
ಅಸಲಿಗೆ ಡಾಲಿಗೆ ಅಂಕಿತ್ ಚೌಹಾಣ್ ಕುಡಿತ ಮತ್ತಿನಲ್ಲಿ ನಿಂದಿಸುತ್ತಿದ್ದ. ಇದೇ ಕಾರಣಕ್ಕೆ ಕೊಲೆ ಮಾಡಿದ್ದಾನೆ. ಕುಡಿದ ಮತ್ತಿನಲ್ಲಿ ನಡೆದ ಕೊಲೆ ಇದು ಎಂದು ಆರೋಪಿ ಪೊಲೀಸರ ಮುಂದೆ ಹೇಳಿಕೆ ಕೊಟ್ಟಿದ್ದಾನೆ. ಉಳಿದ ಆರೋಪಿಗಳ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ. ಅವರಿಗಾಗಿ ಪೊಲಿಸರು ಬಲೆ ಬೀಸಿದ್ದಾರೆ.