Kornersite

International Just In National

ಮೆದುಳು ತಿನ್ನುವ ಅಮೀಬಾ ಸೋಂಕಿಗೆ 2 ವರ್ಷದ ಮಗು ಬಲಿ!

ಮೆದುಳು ತಿನ್ನುವ ಅಮೀಬಾ ಸೋಂಕಿಗೆ ಇತ್ತೀಚೆಗೆ ಮಕ್ಕಳು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ 15 ವರ್ಷದ ಬಾಲಕ ಈ ಸೋಂಕಿನಿಂದ ಸಾವನ್ನಪ್ಪಿದ ಪ್ರಕರಣ ಇತ್ತೀಚೆಗಷ್ಟೇ ಬೆಳಕಿಗೆ ಬಂದಿತ್ತು. ಸದ್ಯ ಇದೇ ಪ್ರಕರಣ ಮತ್ತೊಂದು ನಡೆದಿದೆ.

ಅಮೆರಿಕಾದ ನೆವಾಡಾದ ಎರಡು ವರ್ಷದ ಮಗು ಕೆಲವು ದಿನಗಳಿಂದ ವಿಪರೀತ ಜ್ವರದಿಂದ ಬಳಲುತ್ತಿದ್ದ ಎಂದು ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮಗು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಮಗುವಿನ ತಾಯಿ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಮಗು ನೀರಿನಲ್ಲಿ ಆಟವಾಡುತ್ತಿರುವಾಗ ಸೋಂಕು ಮೂಗು, ಬಾಯಿ ಅಥವಾ ಕಿವಿಗಳ ಮೂಲಕ ದೇಹ ಪ್ರವೇಶಿಸಿದೆ ಎನ್ನಲಾಗಿದೆ. ನಾಗ್ಲೇರಿಯಾ ಫೌಲೆರಿ ಎಂಬುದು ನದಿ ಹಾಗೂ ಸರೋವರ ಸಿಹಿನೀರಿನಲ್ಲಿ ಕಂಡುಬರುವ ಅಮೀಬಾ. ಇದು ಮೂಗಿನ ಮೂಲಕ ದೇಹವನ್ನು ಪ್ರವೇಶಿಸಿದಾಗ ಸೋಂಕು ಮೆದುಳಿನ ಮೇಲೆ ದಾಳಿ ಮಾಡಬಹುದು. ಅಪರೂಪವಾಗಿದ್ದರೂ, ಇದು ಮಾರಣಾಂತಿಕವಾಗಿದೆ. ಮೂಗು ಪ್ರವೇಶಿಸಿದಾಗ ಸೋಂಕಿಗೆ ಒಂದೊಂದೇ ರೋಗ ಲಕ್ಷಣಗಳು ಕಾಣುತ್ತವೆ. ರೋಗಲಕ್ಷಣಗಳು ಕಾಣಿಸಿಕೊಂಡ 18 ದಿನಗಳ ನಂತರ ರೋಗಿಯು ಸಾಯಬಹುದು.

You may also like

National

ರಾಮಲೀಲಾ ಮೈದಾನದಲ್ಲಿ ಜಮಾಯಿಸುತ್ತಿರುವ ರೈತರು

ನವದೆಹಲಿ : ದೇಶದ ಬೇರೆ ಬೇರೆ ರಾಜ್ಯಗಳಿಂದ ರೈತರು ಇಂದು ದೆಹಲಿಯಲ್ಲಿ ಜಮಾಯಿಸುತ್ತಿದ್ದಾರೆ. ವಿವಿಧ ರೈತ ಸಂಘಟನೆಗಳ ಯುನೈಟೆಡ್ ಕಿಸಾನ್ ಮೋರ್ಚಾ (ಎಸ್‌ಕೆಎಂ) ಕೃಷಿ ಉತ್ಪನ್ನಗಳ ಕನಿಷ್ಠ
International

ಅಮೆರಿಕದಲ್ಲಿ ಭೀಕರ ಸುಂಟರಗಾಳಿ – 7 ಜನ ಸಾವು

Washington : ಅಮೆರಿಕ(America)ದಲ್ಲಿ ಭೀಕರ ಸುಂಟರಗಾಳಿ ಬೀಸಿದ ಪರಿಣಾಮ 7 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ.ಅಮೆರಿಕದ ಅರ್ಕಾನ್ಸಾಸ್‌ (Arkansas) ಮತ್ತು ಇಲಿನಾಯ್ಸ್‌ (Illinois)ರಾಜ್ಯಗಳಲ್ಲಿ ಬೀಸಿದ ಸುಂಟಗಾಳಿಗೆ ಹತ್ತಾರು