ಬೆಳಗಾವಿ ಜಿಲ್ಲೆ ಸೇರಿದಂತೆ ಸುತ್ತಮುತ್ತ ಪ್ರದೇಶಗಳಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿದೆ. ಹೀಗಾಗಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಈ ವೇಳೆ ಗೋಕಾಕ್ – ಶಿಂಗಳಾಪೂರ ನಡುವಿನ ಅಪಾಯಕಾರಿ ಸೇತುವೆ ಮೇಲೆ ಬೈಕ್ (Bike) ಸವಾರನೊಬ್ಬ ಹುಚ್ಚಾಟ ಮೆರೆದಿರುವ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಗೋಕಾಕ್ ತಾಲೂಕಿನ ಘಟಪ್ರಭಾ ನದಿಯಲ್ಲಿ (Ghataprabha River) ನೀರಿನ ಪ್ರಮಾಣ ಹೆಚ್ಚಳವಾಗಿದೆ. ಪರಿಣಾಮ ಸೇತುವೆ ಜಲಾವೃತಗೊಂಡಿದ್ದು, ಅಪಾಯಕಾರಿ ಸೇತುವೆಯ ಮೇಲೆ ಬೈಕ್ ಸವಾರ ದುಸ್ಸಾಹಸ ಮೆರೆದಿದ್ದಾನೆ.
ಸೇತುವೆ ಮೇಲೆ ತೆರಳದಂತೆ ಕರ್ತವ್ಯ ನಿರತ ಪೊಲೀಸ್ (Police) ಸಿಬ್ಬಂದಿ ಸೂಚಿಸಿದ್ದಾರೆ. ಬೈಕ್ ಸವಾರ ಪೊಲೀಸರ ಮಾತು ಕೇಳದೆ ಉಕ್ಕಿ ಹರಿಯುತ್ತಿದ್ದ ಸೇತುವೆ ಮೇಲೆ ಬೈಕ್ ಸವಾರಿ ಮಾಡಿದ್ದಾನೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ವಲ್ಪ ಆಯ ತಪ್ಪಿದ್ದರೂ ಆತ ನೀರು ಪಾಲಾಗುತ್ತಿದ್ದ.