Kornersite

Just In State

ಜನರನ್ನು ಆಕರ್ಷಿಸುತ್ತಿರುವ ಆಲಮಟ್ಟಿಯಲ್ಲಿನ ಅಪರೂಪದ ಬಾವಲಿಗಳು!

ವಿಜಯಪುರ ಜಿಲ್ಲೆ ಬರದ ನಾಡು ಇಲ್ಲಿ ಇಲ್ಲಿ ಮರಗಳಿಗೆ ಕೊರತೆ ಇದೆ. ಆದರೆ, ಬೆಟ್ಟ-ಗುಡ್ಡಕ್ಕೆ ಮಾತ್ರ ಯಾವುದೇ ಕೊರತೆ ಇಲ್ಲ. ಸದ್ಯ ಇಲ್ಲಿ ಮರೆಯಾಗಿರುವ ಅಪರೂಪದ ಬಾವುಲಿಗಳು ಮತ್ತೆ ಪತ್ತೆಯಾಗಿದ್ದು, ಜನರು ಸಂತಸದಿಂದ ಮುಗಿಬಿದ್ದು ನೋಡುತ್ತಿದ್ದಾರೆ.

ಕಳೆದ ನಾಲ್ಕೈದು ವರ್ಷಗಳಿಂಗ ಮರೆಯಾಗಿದ್ದ ಬಾವಲಿಗಳ ಗುಂಪು ಸದ್ಯ ಮತ್ತೊಮ್ಮೆ ಕಾಣಿಸಿಕೊಂಡಿವೆ, ಹೀಗಾಗಿ ನೋಡಲು ಬರುವ ಕುತೂಹಲಿಗರ ಸಂಖ್ಯೆಯೂ ಹೆಚ್ಚಿದೆ. ಇಲ್ಲಿ ಸುಮಾರು ಸಾವಿರಾರು ಸಂಖ್ಯೆಯಲ್ಲಿ ಬಾವಲಿಗಳು ಮರದಿಂದ ಮರಕ್ಕೆ ಹಾರುತ್ತಿದ್ದರೆ, ಜನರು ಕೌತುಕದಿಂದ ಕಣ್ತುಂಬಿಕೊಳ್ಳುತ್ತಿದ್ದಾರೆ.

ಸದ್ಯ ಇಲ್ಲಿ ಹಾರಾಡುತ್ತಿರುವ ಬಾವಲಿಗಳು ಸಾಮಾನ್ಯ ಬಾವಲಿಗಳಿಗಿಂತ ವಿಭಿನ್ನವಾಗಿವೆ. ದೊಡ್ಡ ಗಾತ್ರ, ಚೂಪಾದ ಮೂಗು ಹೀಗೆ ಒಂದಿಷ್ಟು ವಿಭಿನ್ನತೆ ಹೊಂದಿವೆ. ರಾತ್ರಿ ವೇಳೆ ತಿರುಗಾಡೋ ಬಾವಲಿಗಳು ಹಗಲಲ್ಲಿ ಸದಾ ಕಿವಿಗಡಚಿಕ್ಕುವ ಶಬ್ದದೊಂದಿಗೆ ಮರದಲ್ಲಿ ಕಾಣಿಸಿಕೊಳ್ಳುತ್ತವೆ. ಆಲಮಟ್ಟಿ ಕೃಷ್ಣಾ ಭಾಗ್ಯ ಜಲನಿಗಮದ ವ್ಯಾಪ್ತಿಯಲ್ಲಿನ ಅರಣ್ಯ ಪ್ರದೇಶದಲ್ಲಿರುವ ಈ ಬಾವಲಿಗಳ ಬಗ್ಗೆ ವಿಶೇಷವಾದ ಅಧ್ಯಯನದ ಅಗತ್ಯವಿದೆ ಎಂದು ಪ್ರವಾಸಿಗರು ಮನವಿ ಮಾಡುತ್ತಿದ್ದಾರೆ.

You may also like

Crime Karnataka State

ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಗಲಾಟೆ

ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ.
Bengaluru State

ಬೈಕ್, ಟ್ಯಾಕ್ಸಿ ಬಂದ್ ಮಾಡುವಂತೆ ಆಗ್ರಹಿಸಿ ಮುಷ್ಕರ!

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ವೈಟ್ ಬೋರ್ಡ್ ಬೈಕ್‌ ಟ್ಯಾಕ್ಸಿಗಳನ್ನು ಬಂದ್ ಮಾಡುವಂತೆ ಆಗ್ರಹಿಸಿ ಆಟೋ ಚಾಲಕರು ಹಾಗೂ ಸಂಘಟನೆಗಳು ಭಾನುವಾರ ಮಧ್ಯರಾತ್ರಿಯಿಂದ ಸೇವೆ ಸ್ಥಗಿತಗೊಳಿಸಿ ಮುಷ್ಕರ