3 ವರ್ಷದ ಮಗುವೊಂದು 40 ಅಡಿ ಕೊಳವೆ ಬಾವಿಗೆ ಬಿದ್ದಿರುವ ಘಟನೆ ಬಿಹಾರದ ನಳಂದದಲ್ಲಿ ನಡೆದಿದೆ. ಈಗಾಗಲೇ ರಕ್ಷಣಾ ಕಾರ್ಯ ಮುಂದುವರೆದಿದೆ. ಶಿಎಂ ಎಂಬ ಬಾಲಕ ಕೊಳವೆ ಬಾವಿಗೆ ಬಿದ್ದವನು. ಶಿವಂನನ್ನು ರಕ್ಷಿಸಲು ಎನ್ ಡಿಆರ್ ಎಫ್ ಮತ್ತು ಇತರ ರಕ್ಷಣಾ ತಂಡಗಳು ಸ್ಥಳಕ್ಕೆ ಬಂದ ಕಾರ್ಯಾಚರಣೆ ನಡೆಸಿವೆ. ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವ ಸಿಬ್ಬಂಧಿಗಳಿಗೆ ಶಿವಂನ ಧ್ವನಿ ಕೇಳುತ್ತಿದೆ.
ಶಿವಂನ ತಾಯಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲಿಯೇ ಆಟವಾಡುತ್ತಿದ್ದ ಮಗನ ಕಾಲು ಜಾರಿ ಕೊಳವೆ ಬಾವಿಗೆ ಬಿದ್ದಿದ್ದಾನೆ. ಮಗುವಿಗೆ ಆಮ್ಲಜನಕವನ್ನು ಪೂರೈಸಲು ಹಾಗೂ ಬೋರ್ ವೆಲ್ ನಿಂದ ಮಹುವನ್ನು ಹೊರತೆಗೆಯಲು ಜೆಸಿಬಿಗಳನ್ನು ಕರೆಸಿದ್ದಾರೆ. ಜೊತೆಗೆ ಮಗುವನ್ನು ಹೊರತೆಗೆದ ನಂತರ ಕೂಡಲೇ ವೈದ್ಯಕೀಯ ಸೇವೆಯ ವಶ್ಯಕತೆ ಇದೆ ಎಂದು ವೈದ್ಯಕೀಯ ತಂಡವನ್ನು ಕೂಡ ಸ್ಥಳಕ್ಕೆ ಕರೆಸಿದ್ದಾರೆ.
ಇದೇ ರೀತಿಯ ಘಟನೆ ಜೂನ್ ಆರರಂದು ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯಲ್ಲಿಯೂ ನಡೆದಿತ್ತು. 300 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಎರಡೂವರೆ ಮಗು ತನ್ನ ಪ್ರಾಣವನ್ನು ಕಳೆದುಕೊಂಡಿತ್ತು. ಇನ್ನು ಮತ್ತೊಂದು ಘಟನೆ ಮಧ್ಯಪ್ರದೇಶದಲ್ಲೇ ನಡೆದಿದೆ. ಕೊಳವೆ ಬಾವಿಗೆ ಬಿದ್ದ ಹೆಣ್ಣು ಮಗುವೊಂದನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿತ್ತು.
ಶಿವಂ ಕೂಡ ಸುರಕ್ಷಿತವಾಗಿ ಆದಷ್ಟು ಬೇಗ ಹೊರಗೆ ಬಂದು ತಾಯಿಯ ಮಡಿಲು ಸೇರಲಿ ಎಂಬುದು ನಮ್ಮ ಆಶಯ.