Bank Holiday: ಬ್ಯಾಂಕ್ ಗಳಿಗೆ ಸಂಬಂಧಪಟ್ಟ ಕೆಲಸಗಳು ಇದ್ದರೇ ಇದೇ ತಿಂಗಳಲ್ಲಿ ಮುಗಿಸಿಕೊಂಡು ಬಿಡಿ. ಯಾಕೆಂದ್ರೆ ಮುಂದಿನ ತಿಂಗಳು ಅಂದರೆ ಆಗಸ್ಟ್ ನಲ್ಲಿ ಬ್ಯಾಂಕ್ ಗಳಿಗೆ ಸಾಲು ಸಾಲಾಗಿ ರಜೆ ಇವೆ. ವಿವಿಧ ರಾಜ್ಯಗಳಲ್ಲಿನ ಬ್ಯಾಂಕುಗಳು ಬರೋಬ್ಬರಿ 14 ದಿನಗಳವರೆಗೆ ಬಂದ್ ಇರಲಿವೆ. ಇವುಗಳಲ್ಲಿ ಎರಡನೇ ಹಾಗೂ ನಾಲ್ಕನೇ ಶನಿವಾರ ಮತ್ತು ಭಾನುವಾರದ ರಜೆಗಳು ಕೂಡ ಸೇರಿವೆ.
ಇನ್ನು ಈ ರಜೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ, ಪಾರ್ಸಿ ಹೊಸ ವರ್ಷ ಹಾಗೂ ರಕ್ಷಾ ಬಂಧನ್ ನಂತಹ ಹಬ್ಬಗಳು ಕೂಡ ಸೇರಿಕೊಂಡಿವೆ. ಓಣಂ ಹಬ್ಬದ ಪ್ರಯುಕ್ತ ಕೊಚ್ಚಿ ಮತ್ತು ತಿರುವನಂತಪುರದಲ್ಲಿ ಬ್ಯಾಂಕುಗಳು ರಜೆ ಇರಲಿವೆ. ಸ್ವಾತಂತ್ಯ ದಿನಾಚರಣೆಯಂದು ಆಲ್ ಮೋಸ್ಟ್ ಎಲ್ಲ ಬ್ಯಾಂಕುಗಳು ರಜೆ ಇರಲಿವೆ. ರಕ್ಷಾ ಬಂಧನದ ಸಮಯದಲ್ಲಿ ಜೈಪುರ, ಶಿಮ್ಲಾ ವಲಯದಲ್ಲಿ ಬ್ಯಾಂಕ್ ರಜೆ ಇರಲಿವೆ. ರಕ್ಷಾ ಬಂಧನ್, ಶ್ರೀ ನಾರಾಯಣ ಗುರು ಜಯಂತಿ ಸಮಯದಲ್ಲಿ ಡೆಹ್ರಾಡೂನ್, ಗ್ಯಾಂಗ್ವಾಕ್, ಕಾನ್ಪುರ, ಕೊಚ್ಚಿ, ಲಕ್ನೋ ಮತ್ತು ತಿರುವನಂತಪುರದಲ್ಲಿ ಪಾಂಗ್-ಲಾಬ್ಸೋಲ್ ಸಂದರ್ಭದಲ್ಲಿ ಬ್ಯಾಂಕುಗಳು ರಜೆ ಇರಲಿವೆ.