ಸಾತಂತ್ರ್ಯ ಹೋರಾಟಗಾರರ 80 ವರ್ಷದ ಪತ್ನಿಯನ್ನು ಜೀವಂತವಾಗಿ ಸುಟ್ಟ್ ಭಯಾನಕ ಘಟನೆ ಮಣಿಪುರದ ಸೆರೋ ಗ್ರಾಮದಲ್ಲಿ ನಡೆದಿದೆ. ಸ್ವಾತಂತ್ಯ ಹೋತಾಟಗಾರರ ಪತ್ನಿ ಮನೆಯೊಳಗೆ ಇದ್ದಾಗ, ಹೊರಗಡೆಯಿಂದ ಬೆಂಕಿ ಹಾಕಿ ಮನೆಗೆ ಬೆಂಕಿ ಹಚ್ಚಿದ್ದಾರೆ. ಸ್ವಾತಂತ್ಯ ಹೋರಾಟಗಾರ ಎಸ್, ಚುರಚಂದ್ ಅವರ ಪತ್ನಿಯನ್ನೇ ದುಷ್ಕರ್ಮಿಗಳು ಭಯಾನಕವಾಗಿ ಕೊಲೆ ಮಾಡಿದ್ದು. ಈ ಹಿಂದೆ ಚುರಚಂದ್ ಅವರನ್ನು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ಗೌರವಿಸಿದ್ದರು. ಈ ಬಗ್ಗೆ ವರದಿ ಕೂಡ ಆಗಿತ್ತು. ಇಂತಹ ಹೋರಾಟಗಾರರ ಪತ್ನಿಗೆ ಈ ರೀತಿ ಮಾಡಿದ್ದು ನಿಜಕ್ಕೂ ದುರಂತ.
ಮಣಿಪುರ ಒಂದು ಕಾಲದಲ್ಲಿ ಸುಂದರ ಪ್ರದೇಶವಾಗಿತ್ತು. ಆದರೆ ಈಗ ಜನಾಂಗೀಯ ಹಿಂಸಾಚಾರದಿಂದ ವಿನಾಶಕ್ಕೆ ಸಾಕ್ಷಿಯಾಗುತ್ತಿದೆ. ಏಕೆಂದರೆ ಪ್ರದೇಶದಾದ್ಯಂತ ಮನೆಗಳ ಮೇಲೆ ಸುಟ್ಟ ಗುರುತುಗಳು ಹಾಗೂ ಬುಲೆಟ್ ಗಳ ಗುರುತು ಕಾಣಬಹುದು.
ಸ್ವಾತಂತ್ಯ ಹೋರಾಟಗಾರ ಚುರಚಂದ್ ಅವರ ಪತ್ನಿ 80 ವರ್ಷದ ಇಬೆತೊಂಬಿ ಮನೆಯೊಳಗೇ ಇದ್ದರು. ದಾಳಿಕೋರರು ಬಂದು ಹೊರಗಡೆಯಿಂದ ಮನೆಗೆ ಬೀಗ ಹಾಕಿದ್ದಾರೆ. ವೃದ್ದೆಯ ಕುಟುಂಬದವರು ರಕ್ಷಿಸಲು ಬರೋವಷ್ಟರಲ್ಲೇ ಬೆಂಕಿ ಸಂಪೂರ್ಣವಾಗಿ ಆವರಿಸಿತ್ತು ಎಂದು ಮೊಮ್ಮಗ ಪ್ರೇಮಕಾಂತ ಪೊಲೀಸರಿಗೆ ತಿಳಿಸಿದ್ದಾರೆ. ಮತ್ತೊಂದು ಸಂಗತಿ ಎಂದರೆ ತನ್ನ ಅಜ್ಜಿಯನ್ನು ಪ್ರೇಮಕಾಂತ ರಕ್ಷಿಸಲು ಹೋದಾಗ, ಆತನ ತೋಳು ಹಾಗೂ ತೊಡೆಗೆ ಗುಂಡುಗಳು ತಗುಲಿವೆ. ಸದ್ಯ ಪ್ರೇಮಕಾಂತ ಜೀವಕ್ಕೆ ಯಾವುದೇ ರೀತಿಯ ಅಪಾಯವಿಲ್ಲ.