Tomato Price: ಟೊಮೆಟೊ ದರದಲ್ಲಿ ಇಳಿಕೆ ಕಂಡಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಟೊಮೆಟೊ ಬೆಲೆ ಇಳಿಕೆಯಾಗಿದೆ. ಬೆಂಗಳೂರಿನಾದ್ಯಂತ ಹಾಪ್ ಕಾಮ್ಸ್ ಘಟಕದಲ್ಲಿ ಟೊಮೆಟೊ ಪ್ರತಿ ಕೆ.ಜಿ ಗೆ 99 ರೂಪಾಯಿಗೆ ಮಾರಾಟವಾಗಿದೆ. ಆದರೆ ದುರಂತ ಅಂದರೆ ಟೊಮೆಟೊ ದರ ಕಡಿಮೆಯಾಗಿದ್ದರೂ ಕೂಡ ಚಿಲ್ಲರೆ ವ್ಯಾಪಾರಿಗಳು, ತಳ್ಳೋ ಗಾಡಿಯವರು ಮಾತ್ರ 120 ರಿಂದ 140 ರೂಪಾಯಿವರೆಗೂ ಮಾರಾಟವನ್ನು ಮೂಂದುವರೆಸಿದ್ದಾರೆ.
ಒಂದು ತಿಂಗಳ ಹಿಂದೆ ಕೆ.ಜಿ ಗೆ 100 ರೂಪಾಯಿ ಇದ್ದ ಟೊಮೆಟೊ ಬೆಲೆ 140 ಕ್ಕೆ ಏರಿತ್ತು. ಆದರೆ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಿಂದ ಟೊಮೆಟೊ ಪೂರೈಕೆ ಚೆನ್ನಾಗಿಯೇ ಶುರುವಾಗಿದೆ. ಹೀಗಾಗಿ ಟೊಮೆಟೊ ಬೆಲೆ ಸ್ಥಿರಗೊಳ್ಳಲು ಪ್ರಾರಂಭಿಸಿದೆ. ಇನ್ನು ಸಾಲು ಸಾಲಾಗಿ ಹಬ್ಬಗಳು ಬರಲು ಶುರುವಾಗುತ್ತದೆ. ಹಬ್ಬ್ಗಳ ಹೊತ್ತಿಗೆ ಟೊಮೆಟೊಗಳ ಉತ್ತಮ ಪೂರೈಕೆ ಆಗುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.