Kornersite

International Just In Sports

ವಿಂಡಿಸ್ ನಲ್ಲಿ ದಾಖಲೆ ಬರೆದ ಅಶ್ವಿನ್-ಜಡೇಜಾ!

ವೆಸ್ಟ್ ವಿಂಡೀಸ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಸ್ಪಿನ್ ಜೋಡಿ ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಜೊತೆಯಾಗಿ 5 ವಿಕೆಟ್ ಉರುಳಿಸಿದ್ದಾರೆ. ಈ ಮೂಲಕ ಮಹತ್ವದ ಮೈಲಿಗಲ್ಲು ಸಾಧಿಸಿದ್ದಾರೆ.

ಈ ಸ್ಟಾರ್ ಸ್ಪಿನ್ ಜೋಡಿ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟಿಗೆ ಆಡುವ ಮೂಲಕ 500 ವಿಕೆಟ್‌ಗಳನ್ನು ಉರುಳಿಸಿದ ಟೀಂ ಇಂಡಿಯಾದ ಎರಡನೇ ಜೋಡಿ ಎನಿಸಿಕೊಂಡಿದೆ. ವೆಸ್ಟ್ ಇಂಡೀಸ್‌ ತಂಡದ ಎರಡು ವಿಕೆಟ್‌ ಪಡೆದ ಅಶ್ವಿನ್ ಈ ದಾಖಲೆ ಬರೆಯಲು ನೆರವಾದರು. ಇದಕ್ಕೂ ಮುನ್ನ ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್ ಜೋಡಿ 500ಕ್ಕೂ ಹೆಚ್ಚು ಟೆಸ್ಟ್ ವಿಕೆಟ್‌ ಗಳನ್ನು ಪಡೆದ ಏಕೈಕ ಭಾರತೀಯ ಜೋಡಿಯಾಗಿತ್ತು. ಈ ಜೋಡಿ ಜೊತೆಯಾಗಿ 501 ವಿಕೆಟ್‌ಗಳನ್ನು ಉರುಳಿಸುವಲ್ಲಿ ಯಶಸ್ವಿಯಾಗುತ್ತು.

54 ಟೆಸ್ಟ್‌ ಪಂದ್ಯಗಳನ್ನಾಡಿರುವ ಅನಿಲ್ ಕುಂಬ್ಳೆ ಹಾಗೂ ಹರ್ಭಜನ್ ಸಿಂಗ್ ಒಟ್ಟು 501 ವಿಕೆಟ್ ಗಳನ್ನು ಉರುಳಿಸಿದ್ದಾರೆ. ಕುಂಬ್ಳೆ ಪಾಲು 281 ವಿಕೆಟ್‌ಗಳಾಗಿದ್ದರೆ, ಹರ್ಭಜನ್ ಸಿಂಗ್ ಪಾಲ್ 220 ವಿಕೆಟ್ ಗಳಿಸಿದ್ದರು. ಸದ್ಯ ಅಶ್ವಿನ್ ಹಾಗೂ ಜಡೇಜಾ ಜೋಡಿ 49 ಟೆಸ್ಟ್‌ಗಳಲ್ಲಿ 500 ವಿಕೆಟ್ ಉರುಳಿಸಿದೆ. ಈ ಜೊತೆ ಪಯಣದಲ್ಲಿ ಅಶ್ವಿನ್ 274 ವಿಕೆಟ್‌ಗಳನ್ನು ಪಡೆದ್ದರೆ, ಎಡಗೈ ಸ್ಪಿನ್ನರ್ ಜಡೇಜಾ 226 ವಿಕೆಟ್ ಉರುಳಿಸಿದ್ದಾರೆ

ಜೊತೆಯಾಗಿ ಅತಿ ಹೆಚ್ಚು ವಿಕೆಟ್ ಉರುಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿರುವ ಬಿಶನ್ ಬೇಡಿ ಮತ್ತು ಬಿಎಸ್ ಚಂದ್ರಶೇಖರ್ ಜೊತೆಯಾಗಿ 42 ಟೆಸ್ಟ್‌ಗಳಲ್ಲಿ ಆಡಿದ್ದು, 368 ವಿಕೆಟ್ ಉರುಳಿಸಿದ್ದಾರೆ. ಇದರಲ್ಲಿ 184 ವಿಕೆಟ್ಗಳು ಬಿಶನ್ ಬೇಡಿಯವರದ್ದಾಗಿದ್ದರೆ, 184 ವಿಕೆಟ್ಗಳು ಬಿಎಸ್ ಚಂದ್ರಶೇಖರ್ ಅವರದ್ದಾಗಿದೆ.

You may also like

Sports

ಡಿವೈನ್ ಭರ್ಜರಿ ಆಟಕ್ಕೆ ಮಂಕಾದ ಜೈಂಟ್ಸ್!

ಮುಂಬಯಿ : ಆಲ್‌ ರೌಂಡರ್‌ ಸೋಫಿ ಡಿವೈನ್‌ ಭರ್ಜರಿ ಆಟಕ್ಕೆ ಗುಜರಾತ್ ಜೈಂಟ್ಸ್ ತಂಡವು ಸೋಲು ಒಪ್ಪಿಕೊಳ್ಳುವಂತಾಯಿತು.ಗುಜರಾತ್‌ ಜೈಂಟ್ಸ್‌ ವಿರುದ್ಧ ಆರ್ ಸಿಬಿ 8 ವಿಕೆಟ್‌ ಗಳ
International

ಅಮೆರಿಕದಲ್ಲಿ ಭೀಕರ ಸುಂಟರಗಾಳಿ – 7 ಜನ ಸಾವು

Washington : ಅಮೆರಿಕ(America)ದಲ್ಲಿ ಭೀಕರ ಸುಂಟರಗಾಳಿ ಬೀಸಿದ ಪರಿಣಾಮ 7 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ.ಅಮೆರಿಕದ ಅರ್ಕಾನ್ಸಾಸ್‌ (Arkansas) ಮತ್ತು ಇಲಿನಾಯ್ಸ್‌ (Illinois)ರಾಜ್ಯಗಳಲ್ಲಿ ಬೀಸಿದ ಸುಂಟಗಾಳಿಗೆ ಹತ್ತಾರು