ಉತ್ತರ ಪ್ರದೇಶ: ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸರ್ವೇ ಆರಂಭವಾಗಿದೆ. ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶದ ಮೇರೆಗೆ ಈ ಸಮೀಕ್ಷೆ ಆರಂಭವಾಗಿದೆ. ಈ ವರದಿ ಕೋರ್ಟ್ ಗೆ ಆಗಸ್ಟ್ 4 ರೊಳಗೆ ಸಲ್ಲಿಕೆಯಾಗಲಿದೆ. ಸುಮಾರು 40 ಜನರಿಂದ ಈ ಸರ್ವೇ ಕಾರ್ಯ ನಡೆದಿದೆ. ಈಗಾಗಲೇ ಜ್ಞಾನವಾಪಿ ಮಸೀದಿ ಒಳಗೆ ಈ 40 ಜನರ ತಂಡವಿದೆ. ಇದರಲ್ಲಿ ಎಎಸ್ ಐ ತಂಡ, ಅರ್ಜಿದಾರರು ಹಾಗೂ ಅವರ ಪರ ವಕೀಲರು ಇದ್ದಾರೆ.
ಇಂದು ಬೆಳಗ್ಗೆ 7 ಗಂಟೆಯಿಂದಲೇ ಈ ಸರ್ವೇ ಕಾರ್ಯ ಮುಂದುವರೆದಿದೆ. ಶಿವಲಿಂಗ ರೂಪದ ರಚನೆ ಇರುವ ವುಜುಖಾನಾ ಹೊರತುಪಡಿಸಿ ಮಸೀದಿಯ ಎಲ್ಲ ಕಡೆ ಸರ್ವೇ ಕಾರ್ಯ ನಡೆಯಲಿದೆ. 2022 ರಲ್ಲಿ ನಡೆದ ಸಮೀಕ್ಷೆ ವೇಳೆ ವುಜುಖಾನಾ ಜಾಗದಲ್ಲಿ ಶಿವಲಿಂಗ ರೂಪದ ರಚನೆ ಪತ್ತೆಯಾಗಿತ್ತು. ನಂತರ ಆ ಜಾಗಕ್ಕೆ ಪ್ರವೇಶವನ್ನು ನಿರ್ಬಂಧನೆ ಹೇರಲಾಗಿತ್ತು. ವಾರಣಾಸಿ ಜಿಲ್ಲಾ ನ್ಯಾಯಾಲಯ ಶುಕ್ರವಾರ ನೀಡಿದ ಆದೇಶದ ಮೇರೆಗೆ ಜ್ಞಾನವಾಪಿ ಮಸೀದಿಯಲ್ಲಿ ಸಮೀಕ್ಷೆ ನಡೆಯಲಿದೆ.
ಪುರಾತನ ಹಿಂದೂ ದೇವಾಲಯವನ್ನು ನೆಲಸಮಗೊಳಿಸಿ ಜ್ಞಾನವಾಪಿ ಮಸೀದಿಯನ್ನು ನಿರ್ಮಿಸಲಾಗಿದೆ. ಹಾಗೂ ಸಂಪೂರ್ಣ ಸತ್ಯವನ್ನು ಬೆಳಕಿಗೆ ತರಲು ವೈಜ್ಞಾನಿಕ ಅಧ್ಯಯನದ ಅಗತ್ಯವಿದೆ ಎಂದು ನಾಲ್ವರು ಮಹಿಳಾ ಭಕ್ತರು ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು. ಈ ಮಹಿಳೆಯರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ವೈಜ್ಞಾನಿಕ ಸರ್ವೇಗೆ ಆದೇಶ ಮಾಡಿದೆ.