ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿದ ಪೊಲೀಸರು ಕಳ್ಳರನ್ನು ಬಂಧಿಸಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲ ನಡೆದಿದೆ.
ಸಿನಿಮೀಯ ರೀತಿಯಲ್ಲಿ ದರೋಡೆ ಹಾಗೂ ದೇವಸ್ಥಾನದ ನಿಧಿ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ಆರೋಪಿಗಳನ್ನೇ ಪೊಲೀಸರು ಬಂಧಿಸಿದ್ದಾರೆ. 6 ಜನ ಕಳ್ಳರ ಗ್ಯಾಂಗನ್ನು ಪೊಲೀಸರು ಬಂಧಿಸಿದ್ದು ದಾವಣಗೆರೆಯ ಅಜಾದ್‌ನಗರ ನಿವಾಸಿ ದಿವಾನ್‌ಸಾಬ್ ಜಾವೀದ್, ಜಗಳೂರು ನಿವಾಸಿ ಪಿ.ಕಲ್ಲೇಶಿ(48), ಹುಬ್ಬಳ್ಳಿಯ ಮಲ್ಲಿಕಾರ್ಜುನ(30), ಹನುಮಂತ ಸೋಪಾನಿ ಪವಾರ್(33), ಅಮೀರ್‌ಖಾನ್ ಪಠಾಣ್, ಇಳಕಲ್ ಮೂಲದ ಮುರ್ತಾಜಾಸಾಬ್ ಬಂಧಿತರು.
ಬಂಧಿತರು ಪುರಾತನ ದೇವಾಲಯಗಳನ್ನೇ ಗುರುತಿಸಿ ನಿಧಿ ಹುಡುಕುತ್ತಿದ್ದರು. ಬಿದರಕೆರೆ-ಸಂತೆ ಮುದ್ದಾಪುರ ಗ್ರಾಮಗಳ ನಡುವೆ ದೇವಸ್ಥಾನದಲ್ಲಿ ನಿಧಿಗಾಗಿ ಶೋಧ ಮಾಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇವರು ಬಸವಣ್ಣ ದೇವಸ್ಥಾನದಲ್ಲಿ ನಿಧಿಗಾಗಿ ಗುಂಡಿ ಅಗೆದಿದ್ದರು. ಬಸವಣ್ಣನ ಮೂರ್ತಿ ಕಿತ್ತು ಪಕ್ಕದಲ್ಲಿಟ್ಟು ಶೋಧನೆ ಮಾಡುವ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಬಂಧಿತ ಆರೋಪಿಗಳಿಂದ 1 ಕಾರು, ಕಬ್ಬಿಣದ ಸುತ್ತಿಗೆ, ಕೈಗವಸು, ಕಟ್ಟಿಂಗ್ ಪ್ಲೇಯರ್, ಕಬ್ಬಿಣದ ಪ್ಲಾಟ್ ಚಿಸೆಲ್, ಸುರ್‌ಸುರ್‌ಬತ್ತಿ, ಖಾರದ ಪುಡಿ ಪಾಕೇಟ್, ಮೊಬೈಲ್‌ಗಳು, ಟಾರ್ಚ್, ಚಾಕು ಜಪ್ತಿ ಮಾಡಲಾಗಿದೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.