ಎಲಾನ್ ಮಸ್ಕ್ (Elon Musk) ಟ್ವಿಟ್ಟರ್ ನ್ನು ಖರೀದಿಸಿದ ನಂತರ ಮೈಕ್ರೋಬ್ಲಾಗಿಂಗ್ ಪ್ಲಾಟ್ ಫಾರ್ಮ್ ನಲ್ಲಿ ಒಂದಿಲ್ಲ ಒಂದು ಬದಲಾವಣೆಯಾಗುತ್ತಿದೆ. ಈಗ (Twitter) ಹೊಸ ಲೋಗೋ ಲಾಂಚ್ ಮಾಡುವುದಾಗಿ ಘೋಷಿಸಿದ್ದಾರೆ.
ಈ ಕುರಿತು ಎಲಾನ್ ಮಸ್ಕ್ ಟ್ವೀಟ್ ಮಾಡುವ ಮೂಲಕ ಟ್ವಿಟರ್ ಲೋಗೋವನ್ನು (Twitter Logo) ಬದಲಾಯಿಸುವ ಕುರಿತು ಹೇಳಿದ್ದಾರೆ. ನಾವು ಟ್ವಿಟ್ಟರ್ ಬ್ರ್ಯಾಂಡ್ಗೆ ಮತ್ತು ಎಲ್ಲಾ ಪಕ್ಷಿಗಳಿಗೆ ವಿದಾಯ ಹೇಳುತ್ತೇವೆ,” ಎಂದು ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದಾರೆ.
ಸದ್ಯ ಅದರ ಲೋಗೋ ಪಕ್ಷಿ ಆಗಿದ್ದು, ಸದ್ಯದಲ್ಲೇ ಇದು ಬದಲಾವಣೆ ಆಗಲಿದೆ. ಎಲಾನ್ ಮಸ್ಕ್ ಈ ರೀತಿ ಟ್ವೀಟ್ ಮಾಡಿದ ಬೆನ್ನಲ್ಲಿಯೇ ಸಾಮಾಜಿಕ ಜಾಲತಾಣದಲ್ಲಿ ಪರ- ವಿರೋಧ ಚರ್ಚೆಗಳು ಶುರುವಾಗಿವೆ. ಹಲವರು ಟ್ವಿಟ್ಟರ್ ಲೋಗೋವನ್ನು ಬದಲಾಯಿಸ ಬೇಡಿ ಎಂದು ಹೇಳುತ್ತಿದ್ದಾರೆ.
‘ಎಕ್ಸ್’ ಆ್ಯಪ್ ಬಗ್ಗೆಯೂ ಟ್ವೀಟ್ ಮಾಡಿರುವ ಮಸ್ಕ್, ನಾಳೆಯೇ ನಾವು ಜಗತ್ತಿನಾದ್ಯಂತ ಲೈವ್ ಹೋಗಲಿದ್ದೇವೆ ಎಂದು ಘೋಷಿಸಿದ್ದಾರೆ.