Kornersite

Just In Karnataka State

ಟೊಮೆಟೊ ಮಾರಿ ಒಂದೇ ತಿಂಗಳಲ್ಲಿ ಕೋಟ್ಯಾಧಿಪತಿಯಾದ ರೈತ

Tomato Price: ಟೊಮೆಟೊ ಬೆಲೆ ಗಗನಕ್ಕೇರಿದೆ. ಟೊಮೆಟೊ ವ್ಯಾಪಾರಿಗಳು ಹಾಗೂ ರೈತರು ಹಿಂದೆಂದೂ ಕಾಣದಷ್ಟು ಹಣ ಗಳಿಸಿದ್ದಾರೆ. ದೇಶಾದ್ಯಂತ ಇಳುವರಿ ಕುಸಿದಿರುವುದೇ ಟೊಮೆಟೊ ಬೆಲೆಯಲ್ಲಿ ಸಡನ್ ಆಗಿ ಏರಿಕೆ ಕಂಡಿದೆ.

ಟೊಮೆಟೊ ಬೆಲೆ ಹೆಚ್ಚಾಗ್ತಾ ಇದ್ದಂತೆ ರೈತರಿಗೂ ಡಿಮ್ಯಾಂಡ್ ಹೆಚ್ಚಾಗಿದೆ. ಟೊಮೆಟೊ ಬೆಲೆ ಎಷ್ಟೇ ಹೆಚ್ಚಾದ್ರು ಕೂಡ ಗ್ರಾಹಕರ ಖರೀದಿ ಮಾತ್ರ ಕಡಿಮೆಯಾಗಿಲ್ಲ. ಈ ತಿಂಗಳಲ್ಲಿ ಟೊಮೆಟೊ ಕಟಾವು ಮಾಡಿರುವ ರೈತರಿಗೆ ಭರ್ಜರಿ ಲಾಭವಾಗಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ರೈತನೊಬ್ಬ ಟೊಮೆಟೊ ಕೃಷಿಯಿಂದ ಕೋಟಿಗಟ್ಟಲೆ ಆದಾಯ ಗಳಿಸಿದ್ದಾನೆ. ಕೋಟಿಗಟ್ಟಲೆ ಆದಾಯ ಗಳಿಸಿದ ರೈತನ ಹೆಸರು ಚಂದ್ರಮೌಳಿ. ಇವರು 32 ಎಕರೆ ಜಮೀನನ್ನು ಹೊಂದಿದ್ದಾರೆ. ಚಂದ್ರಮೌಳಿ ಕುಟುಂಬ ಹಲವು ವರ್ಷಗಳಿಂದ ಟೊಮೆಟೊ ವ್ಯಾಪಾರ ಮಾಡುತ್ತಿದ್ದಾರೆ. ಪ್ರತಿ ವರ್ಷ ಜುಲೈನಲ್ಲಿ ಇಳುವರಿ ಬರುತ್ತೆ ಎಂದು ಏಪ್ರಿಲ್ ನಲ್ಲಿ ಟೊಮೆಟೊ ಬೆಳೆ ಹಾಕಿದ್ದರು.

32 ಎಕರೆ ಜಮೀನಿನಲ್ಲಿ ಎರಡು ಕಡೆ ಒಟ್ಟು 22 ಎಕರೆಯಲ್ಲಿ ಟೊಮೆಟೊ ಗಿಡಗಳನ್ನು ನೆಟ್ಟಿದ್ದಾರೆ. ಜೂನ್ ಕೊನೆಯ ವಾರದಲ್ಲಿ ಇಳುವರಿ ಆರಂಭವಾಗಿದೆ. ಇಳುವರಿ ಬರುತ್ತಿದ್ದಂತೆ ಕರ್ನಾಟಕದ ಕೋಲಾರ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ 15 ಕೆ.ಜಿ ಬಾಕ್ಸ್ ಗೆ 1500 ರೂಪಾಯಿ ಇದೆ. ಸೋ ಟೋಟಲ್ ಆಗಿ ಚಂದ್ರಮೌಳಿ ಕುಟುಂಬದವರು 40 ಸಾವಿರ ಬಾಕ್ಸ್ ಮಾರಾಟ ಮಾಡಿದ್ದಾರೆ. ಈ 40 ಬಾಕ್ಸ್ ಗಳಿಂದ ನಾಲ್ಕು ಕೋಟಿ ರೂಪಾಯಿಯನ್ನು ಗಳಿಸಿದ್ದಾರೆ.

You may also like

Crime Karnataka State

ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಗಲಾಟೆ

ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ.
Bengaluru State

ಬೈಕ್, ಟ್ಯಾಕ್ಸಿ ಬಂದ್ ಮಾಡುವಂತೆ ಆಗ್ರಹಿಸಿ ಮುಷ್ಕರ!

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ವೈಟ್ ಬೋರ್ಡ್ ಬೈಕ್‌ ಟ್ಯಾಕ್ಸಿಗಳನ್ನು ಬಂದ್ ಮಾಡುವಂತೆ ಆಗ್ರಹಿಸಿ ಆಟೋ ಚಾಲಕರು ಹಾಗೂ ಸಂಘಟನೆಗಳು ಭಾನುವಾರ ಮಧ್ಯರಾತ್ರಿಯಿಂದ ಸೇವೆ ಸ್ಥಗಿತಗೊಳಿಸಿ ಮುಷ್ಕರ