ಜಗತ್ತಿನ 100ನೇ ಶ್ರೀಮಂತ ಅಥ್ಲೀಟ್ ಗಳ ಪೈಕಿ ಏಷ್ಯಾದ ಇಬ್ಬರು ಅಥ್ಲೀಟ್ ಗಳು ಮಾತ್ರ ಸ್ಥಾನ ಪಡೆದಿದ್ದಾರೆ. ಇದರಲ್ಲಿ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ವಿರಾಟ್ ಕೊಹ್ಲಿ ಅವರ ನಿವ್ವಳ ಮೌಲ್ಯ ಸಾವಿರ ಕೋಟಿ ಗಡಿ ದಾಟಿದೆ. ಇನ್ನು ಏಷ್ಯಾದ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಕೊಹ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.
ಏಷ್ಯಾದ ಶ್ರೀಮಂತ ಅಥ್ಲೀಟ್ ಗಳ ಪೈಕಿ ವಿರಾಟ್ ಕೊಹ್ಲಿ ಎರಡನೇ ಸ್ಥಾನ ಗಿಟ್ಟಿಸಿಕೊಂಡರೇ ಇನ್ನು ಮೊದಲನೇ ಸ್ಥಾನವನ್ನು ನವೊಮಿ ಒಸಾಕ ಪಡೆದುಕೊಂಡಿದ್ದಾರೆ. ಯಸ್, ಜಪಾನಿನ 25 ವರ್ಷದ ಟೆನಿಸ್ ತಾರೆ ನವೊಮಿ ಒಸಾಕ ಏಷ್ಯಾದ ಶ್ರೀಮಂತ ಅಥ್ಲೀಟ ಎನಿಸಿಕೊಂಡಿದ್ದಾನೆ.
ನವೊಮಿ ಒಸಾಕ 2022 ರಲ್ಲಿ ವಾರ್ಷಿಕ ಸರಾಸರಿ 53.2 ಮಿಲಿಯನ್ ಡಾಲರ್ ಆದಾಯವನ್ನು ಸಂಪಾದಿಸಿದ್ದಾರೆ. ಈ ಪೈಕಿ 1.2 ಮಿಲಿಯನ್ ಡಾಲರ್ ಬಹುಮಾನ ರೂಪದಲ್ಲಿ ಬಂದಿದ್ದರೆ ಇನ್ನುಳಿದ 52 ಮಿಲಿಯನ್ ಡಾಲರ್ ಹಣ ಎಂಡೋರ್ಸ್ ಮೆಂಟ್ ರೂಪದಲ್ಲಿ ಬಂದಿದೆ.