ಬೆಂಗಳೂರಿನ ಮಾಡೆಲ್ ವಿದ್ಯಾಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಾಡೆಲ್ ಆತ್ಮಹತ್ಯೆಯ ಹಿಂದೆ ಫೇಸ್ ಬುಕ್ ಪ್ರಿಯಕರನಿಂದ ಲವ್, ಸೆಕ್ಸ್, ದೋಖಾ ಆಗಿರುವ ಬಗ್ಗೆ ಮಹತ್ವದ ಮಾಹಿತಿ ಬೆಳಕಿಗೆ ಬಂದಿದೆ. ವಿದ್ಯಾಶ್ರೀ ಮಾಡಲಿಂಗ್ ಜೊತೆಗೆ ಸಾಫ್ಟ್ ವೇರ್ ಉದ್ಯೋಗಿಯಾಗಿದ್ದಳು. ವಿದ್ಯಾಶ್ರೀ ಜೂಲೈ 21 ರಂದು ಕೆಂಪಾಪುರದ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದೀಗ ವಿದ್ಯಾಶ್ರೀ ಬರೆದಿಟ್ಟ್ ಡೆತ್ ನೋಟ್ ಪತ್ತೆಯಾಗಿದೆ. ಈ ಡೆತ್ ನೋಟ್ ನಲ್ಲಿ ತನ್ನ ಸಾವಿಗೆ ಲವರ್ ಅಕ್ಷಯ್ ಕಾರಣ ಎಂದು ಬರೆದಿಟ್ಟಿದ್ದಾಳೆ.
ಫೇಸ್ ಬುಕ್ ಮೂಲಕ ಪರಿಚಯವಾದ ಅಕ್ಷಯ್, ಜಿಮ್ ಟ್ರೈನ್ ಕೂಡ ಹೌದು. ಈತನ ಜೊತೆ ಮೊದಲಿಗೆ ಸ್ನೇಹ ಬೆಳೆದಿದೆ. ನಂತರ ಸ್ನೇಹ ಪ್ರೀತಿಗೆ ತಿರುಗಿತ್ತು. ಎರಡು ವರ್ಷಗಳಿಂದ ಇಬ್ಬರೂ ಪ್ರೀತಿ ಮಾಡುತ್ತಿದ್ದರು. ಇಬ್ಬರ ಮಧ್ಯೆ ಮೂರು ತಿಂಗಳ ಹಿಂದೆ ಸ್ವಲ್ಪ ಕಿರಿಕ್ ಆಗಿತ್ತು. ಅಕ್ಷಯ್ ತನ್ನನ್ನು ಮದುವೆಯಾಗೋದಾಗಿ ನಂಬಿಸಿ ಮೋಸ ಮಾಡಿದ್ದಾನೆ. ಆತನಿಗೆ ಸಾಕಷ್ಟು ಹಣ ಕೊಟ್ಟಿದ್ದ ವಿದ್ಯಾಶ್ರೀ ಮರಳಿ ಹಣವನ್ನು ಕೇಳಿದ್ದಾಳೆ. ವಿದ್ಯಾಶ್ರೀ ಹಣ ಕೇಳಿದ ನಂತರ ಅಕ್ಷಯ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದರಿಂದ ವಿದ್ಯಾಶ್ರೀ ಮಾನಸಿಕವಾಗಿ ನೊಂದಿದ್ದಳು. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ವಿದ್ಯಾಶ್ರೀ ಪೋಷಕರು ಅಕ್ಷಯ್ ನ ವಿರುದ್ದ ಪೊಲೀಸರಿಗೆ ದೂರನ್ನ ನೀಡಿದ್ದಾರೆ. ಈ ದೂರಿನ ಅನ್ವಯ ಅಕ್ಷಯ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

