ಗೂಗಲ್ (Google) ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಹಳೆಯ ಆಪರೇಟಿಂಗ್ ಸಿಸ್ಟಮ್(Operating System) ಆವೃತ್ತಿಗಳಿಗೆ ಬೆಂಬಲ ನೀಡುವ ಸ್ಮಾರ್ಟ್ ಫೋನ್ (Smart Phone)ಗಳನ್ನು ನಿಲ್ಲಿಸಲು ನಿರ್ಧಾರ ಮಾಡಿದೆ. ಹೀಗಾಗಿ ಓಲ್ಡ್ ಆಪರೇಟಿಂಗ್ ಸಿಸ್ಟಮ್ ಗಳನ್ನು ಬಳಸುವ ಬಳಕೆದಾರರಿಗೆ ಹೊಸ ಅಪ್ಡೇಟ್ ಘೋಷಣೆ ಮಾಡಿದೆ. ಕಂಪನಿಯು ಒಂದು ದಶಕದ ಹಿಂದಿನ ಕಿಟ್ ಕ್ಯಾಟ್ ಓಎಸ್ ಗೆ ಬೆಂಬಲ ನಿಲ್ಲಸಲಾಗುವುದು ಎಂದು ಘೋಷಣೆ ಮಾಡಿದೆ. ಹಳೆಯ ಓಎಸ್ (OS) ಹೊಂದಿರುವ ಫೋನ್ ಗಳನ್ನು ಬಳಸುವ ಬಳಕೆದಾರರು ಹೊಸ ಸಾಧನಗಳಿಗೆ ಬದಲಾಯಿಸಬೇಕು.
ಮುಂದಿನ ತಿಂಗಳಿನಿಂದ ಗೂಗಲ್ ಪ್ಲೇ ಸೇವೆಗಳು ಇನ್ನು ಮುಂದೆ ಕಿಟ್ ಕ್ಯಾಟ್ ಸಾಧನಗಳಲ್ಲಿ ಅಪ್ಡೇಟ್ ಗಳ ಯಾವುದೇ ರೀತಿಯ ಮಾಹಿತಿ ಸ್ವೀಕಾರ ಮಾಡುವುದಿಲ್ಲ.