ನಮಗೇನಾದ್ರು ಬೆಲೆಬಾಳುವ ವಸ್ತು ಖರೀದಿ ಮಡಬೇಕು ಅಂದ್ರೆ ಸಾಲ ಮಾಡ್ತೀವಿ, ಚಿನ್ನ ಅಡ ಇಡ್ತೀವಿ, ಕೂಡಿಟ್ಟ ಹಣದಲ್ಲಿ ಖರೀದಿ ಮಾಡ್ತೀವಿ. ಇದ್ಯಾವುದು ಆಗದೇ ಇದ್ದಲ್ಲಿ ಹೋಗ್ಲಿ ಬಿಡಪ್ಪ ಅದು ನಮ್ಮ ಕೈಗೆ ಏಟಕದ ವಸ್ತು ಅಂತ ಅಂದುಕೊಂಡು ಸುಮ್ಮನೇ ಆಗಿ ಬಿಡ್ತೀವಿ. ಆದ್ರೆ ಇಲ್ಲೊಂದು ದಂಪತಿ ತಾವು ಐಫೋನ್ ಖರೀದಿ ಮಾಡಬೇಕು ಅನ್ನೋ ಕಾರಣಕ್ಕೆ ಹೆತ್ತ ಮಗುವನ್ನೇ ಮಾರಾಟ ಮಾಡಿದ್ದಾರೆ. ಈ ಘಟನೆ ನಡೆದಿದ್ದು ಪಶ್ಚಿಮ ಬಂಗಾಳದಲ್ಲಿ.
ಪಶ್ಚಿಮ ಬಂಗಾಳದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ. ಐಫೋನ್ ಖರೀದಿ ಮಾಡಲು ತಮ್ಮ ಸ್ವಂತ ಮಗುವನ್ನೇ ಮಾರಾಟ ಮಾಡಿದ್ದಾರೆ ದಂಪತಿ. ಐಫೋನ್ ಖರೀದಿ ಮಾಡಲು ಹಣವಿರಲಿಲ್ಲ್. ಐಫೋನ್ ಖರೀದಿ ಮಾಡಿ ಇನ್ ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡಬೇಕೆನ್ನುವ ಉದ್ದೇಶದಿಂದ ಈ ಕೃತ್ಯ ಏಸಗಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ತಾಯಿ ಸತಿ ಹಾಗೂ ಮಗುವನ್ನು ಖರೀದಿ ಮಾಡಿದ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಮಗುವಿನ ತಂದೆ ಜೈದೇವ್ ತಲೆಮರೆಸಿಕೊಂಡಿದ್ದಾನೆ.
ದಂಪತಿ ಆರ್ಥಿಕ ಸಂಕಷ್ಟದಲ್ಲಿದ್ದರು. ಅಕ್ಕ ಪಕ್ಕದ ಮನೆಯವರಿಂದ ಹಣವನ್ನು ಸಾಲವನ್ನಾಗಿ ಪಡೆಯುತ್ತಿದ್ದರು. ಆದರೆ ಇತ್ತೀಚೆಗೆ ದಂಪತಿಯಲ್ಲಿ ಸಾಕಷ್ಟು ಬದಲಾವಣೆ ಕಾಣುತ್ತಿತ್ತು. ಅಲ್ಲದೇ ದಂಪತಿ ಐಫೋನ್ ಬಳಸುತ್ತಿರುವುದನ್ನು ಅಕ್ಕ ಪಕ್ಕದವರು ಗಮನಿಸಿದ್ದಾರೆ. ಮತ್ತೊಂದು ವಿಚಾರ ಅಂದ್ರೆ ದಂಪತಿಗಳ 8 ತಿಂಗಳ ಹೆಣ್ಣು ಮಗು ಕೂಡ ಕಾಣುತ್ತಿರಲಿಲ್ಲ. ಹೀಗಾಗಿ ದಂಪತಿಯನ್ನು ಮಗು ಎಲ್ಲಿ ಎಂದು ವಿಚಾರಿಸಿದಾಗ ಮಗು ಮಾರಿರುವುದಾಗಿ ಬಾಯಿ ಬಿಟ್ಟಿದ್ದಾರೆ. ಕೂಡಲೇ ಅಕ್ಕ ಪಕ್ಕದವರು ಪೊಲೀಸರಿಗೆ ವಿಷಯವನ್ನು ತಿಳಿಸಿದ್ದಾರೆ.