ಚಿತ್ರದುರ್ಗದಲ್ಲಿ ಕಲುಷಿತ ನೀರು ಸೇವನೆ ಮಾಡಿ 70 ಕ್ಕೂ ಹೆಚ್ಚು ಜನರು ಅಸ್ವಸ್ಥತಾಗಿದ್ದಾರೆ. ಈಗಾಗಲೇ ಸಾವಿನ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಈ ಅಸ್ವಸ್ಥರಲ್ಲಿ ಮಕ್ಕಳು ಸಹ ಇದ್ದಾರೆ.
ಯಾರೋ ಮಾಡಿದ ತಪ್ಪಿಗೆ ಇನ್ಯಾರದ್ದು ಬಲಿ ಎಂಬಂತಾಗಿದೆ ಚಿತ್ರದುರ್ಗದ ಪ್ರಕರಣ. ಇದೀಗ ಈ ಕೇಸ್ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ನೀರಗಂಟಿಯ ಮಗಳು ದಲಿತ ಹುಡುಗನನ್ನು ಪ್ರೀತಿಸಿದ್ದಾಳೆ. ಇದೇ ಕಾರಣಕ್ಕೆ ಈ ದುರ್ಘಟನೆ ನಡಿದಿದೆ ಎಂದು ಹೇಳಲಾಗುತ್ತಿದೆ.
ದಲಿತರು ಹಾಗೂ ಸವರ್ಣಿಯರ ನಡುವಿನ ಹಳೇ ವೈಷಮ್ಯವೇ ಇದಕ್ಕೆಲ್ಲ ಕಾರಣ. ಕವಾಡಗರಹಟ್ಟಿಯ ನೀರಗಂಟಿ ಸುರೇಶನ ಮಗಳ ವಿರುದ್ದ ದಲಿತ ಯುವಕನು ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿ ಒಂದು ವರ್ಷದ ಹಿಂದೆ ಪೋಕ್ಸೋ ಕೇಸ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಹಳೇ ದ್ವೇಷಕ್ಕೆ ಈ ಕೃತ್ಯ ಎಸಗಿದ್ದಾರೆ ಎಂದು ಮೃತ ಮಂಜುಳ ಅವರ ಮಾವ ರಾಮಣ್ಣ ಆರೋಪ ಮಾಡಿದ್ದಾರೆ.
ಇನ್ನು ಕಲುಷಿತ ನೀರು ಕುಡಿದು ಸಾವನ್ನಪ್ಪಿರುವವರ ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಕಲುಷಿತ ನೀರಿನ ಪ್ರಯೋಗಾಲಯದ ವರದಿ ಬರಬೇಕಿದೆ. ಪ್ರಕರಣ ಕುರಿತು ಸೂಕ್ತ ಕ್ರಮ ಕೈಗೊಂಡು, ತಪ್ಪಿತಸ್ಥರ ವಿರುದ್ದ ಕ್ರಮ ಜರಗಿಸೋದಾಗಿ ಡಿಸಿ, ಎಸ್ಪಿ ಹೇಳಿದ್ದಾರೆ.