ಆಕೆಗೆ ಗಂಡನಿಗಿಂತ ಹಣವೇ ಮುಕ್ಯವಾಗಿ ಹೋಯ್ತು. ಇನ್ನು ತನ್ನ ಹೆಂಡ್ತಿ ದುಡ್ಡು ದುಡ್ಡು ಅಂತ ಅಂದರೂ ಕೂಡ ನೀನೇ ನನ್ನ ಸರ್ವಸ್ವ ಎಂದುಕೊಂಡಿದ್ದ. ಬಟ್ ಕೊನೆಗೆ ಅದೇ ದುಡ್ಡಿಗಾಗಿ ತನ್ನ ಪ್ರಾಣಕ್ಕೆ ಕುತ್ತು ಬರುತ್ತ್ ಎಂದು ಕನಸಿನಲ್ಲೂ ಆತ ಊಹಿಸಿರಲಿಲ್ಲ.
ಚನ್ನರಾಯ ಪಟ್ಟಣದ 26 ವರ್ಷದ ಕಿರಣ್ ಉದಯ್ ಪುರದಲ್ಲಿ ಬೇಕರಿಯೊಂದನ್ನ ನಡೆಸುತ್ತಿದ್ದ. ಇನ್ನು ವಗರಹಳ್ಳಿ ಗ್ರಾಮದ 24 ವರ್ಷದ ಸ್ಪಂದನಾ, ಕಿರಣ್ ನ ಪತ್ನಿ. ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಪ್ರೀತಿಸಿದವಳೇ ಸಂಗಾತಿಯಾಗಿ ಸಿಕ್ಕಿದ್ದಾಳೆ ಎಂಬ ಖುಷಿಯಲ್ಲಿದ್ದ ಕಿರಣ್. ಆದರೆ ಸ್ಪಂದನಾ ಮಾತ್ರ ಮಾಯಾಂಗಿನಿ. ಪ್ರೀತಿಸುವಾಗ ಚೆನ್ನಾಗಿಯೇ ಇದ್ದಳು. ಮದುವೆಯಾಗ್ತಾ ಇದ್ದಂತೆ ತನ್ನ ಅಸಲಿ ಚಹರೆ ತೋರಿಸಿದ್ದಾಳೆ. ಮದುವೆಯಾದ ಮೇಲೆ ಗಂಡನ ಮನೆಯಲ್ಲಿ ಸಂಸಾರ ಮಾಡದೇ ತವರು ಮನೆಗೆ ಹೋಗಿದ್ದಳು. ಅಷ್ಟೇ ಅಲ್ಲ ತನ್ನ ಮನೆಯವರ ಜೊತೆ ಸೇರಿ ಕಿರಣ್ ಗೆ ಹಣದ ಬೇಡಿಕೆ ಇಟ್ಟಿದ್ದಾಳೆ. ಮಾನಸಿಕವಾಗಿ ಕಿರಣ್ ಗೆ ಕಿರುಕುಳ ಕೊಟ್ಟಿದಾರೆ. ಕಿರಣ್ ಇವರ ಮಾತಿಗೆ ಒಪ್ಪದೇ ಹಣ ಕೊಡದೇ ಇದ್ದಾಗ ಪೊಲೀಸರ ಮೊರೆ ಹೋಗಿದ್ದಾಳೆ ಸ್ಪಂದನಾ.
ಪೊಲೀಸರಿಗೆ ವರದಕ್ಷಿಣೆ ಕಿರುಕುಳ ಎಂದು ದೂರು ನೀಡಿ ಕಿರಣ್ ನನ್ನು ಜೈಲಿಗೆ ಕಳುಹಿಸಿದ್ದರು. ನಂತರ ಕಿರಣ್, ಜಾಮೀನಿನ ಮೇಲೆ ಹೊರಗೆ ಬಂದಿದ್ದ. ಇಷ್ಟಕ್ಕೆ ಸ್ಪಂದನಾ ಕುಟುಂಬ ಸುಮ್ಮನಾಗಲಿಲ್ಲ. ಕಿರಣ್ ಬೇಕರಿ ಬಳಿ ಬಂಸು ಜಗಳವಾಡಿದ್ದಾರೆ. ಇದರಿಂದ ಮನನೊಂದ ಕಿರಣ್, ಮನೆಯಿಂದ ಹೊರಗೆ ಹೋದವನು ಮರಳಿ ಬರಲೇ ಇಲ್ಲ. ತೋಟದ ಮನೆಯಲ್ಲಿ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.