ಅಲಹಾಬಾದ್: ಜ್ಞಾನವಾಪಿ ಮಸೀದಿ ಆವರಣದಲ್ಲಿ ಪುರಾತತ್ವ ಇಲಾಖೆ ಸಮೀಕ್ಷೆ ನಡೆಸಲು ಅಲಹಾಬಾದ್ ಹೈಕೋರ್ಟ್ ಅನುಮತಿ ನೀಡಿದೆ. ಅಂಜುಮನ್ ಇಂತೆಜಾಮಿಯಾ ಮಸೀದಿ ಸಮಿತಿಯ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದ್ದು, ಶೀಘ್ರವಾಗಿ ಸರ್ವೇ ನಡೆಸಲು ಅನುಮತಿ ನೀಡಿದೆ.
ಅಲಹಾಬಾದ್ ಹೈಕೋರ್ಟ್ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ ಎಂದು ಜ್ಞಾನವಾಪಿ ಸಮೀಕ್ಷೆ ಪ್ರಕರಣದಲ್ಲಿ ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಎ ಎನ್ ಐ ಗೆ ತಿಳಿಸಿದ್ದಾರೆ. ಈಗಾಗಲೇ ವಾರಣಾಸಿ ಕೋರ್ಟ್ ಸರ್ವೇ ಮಾಡಲು ಜುಲೈ 21ರಂದು ಅನುಮತಿ ನೀಡಿತ್ತು. ಆದರೆ ಮಸೀದಿ ಸಮಿತಿ ಸುಪ್ರಿಂ ಮೊರೆ ಹೋಗಿ ಸರ್ವೇಗೆ ತಡೆ ತಂದಿತ್ತು.
ಸರ್ವೇಯಿಂದ ಮಸೀದಿಯ ಮೂಲ ರಚನೆಗೆ ಭಂಗ ಉಂಟಾಗುತ್ತದೆ ಎಂದು ಮಸೀದಿ ಸಮಿತಿ ಆತಂಕ ವ್ಯಕ್ತಪಡಿಸಿತ್ತು. ಆದರೆ ಹೀಗೆ ಆಗುವುದಿಲ್ಲ ಎಂದು ಇಲಾಖೆ ಸುಪ್ರೀಂ ಕೋರ್ಟ್ ಗೆ ಸ್ಪಷ್ಟಪಡಿಸಿದೆ.