ನವದೆಹಲಿ : ಚಂದ್ರನ (Moon) ಮೇಲ್ಮೈನಲ್ಲಿ ಇಸ್ರೋ ಅಧ್ಯಯನ ಆರಂಭಿಸಿದೆ. ದಕ್ಷಿಣ ಧ್ರುವದಲ್ಲಿ ಗಂಧಕ (Sulphur) ಇರುವುದನ್ನು ಚಂದ್ರಯಾನ-3 ದೃಡಪಡಿಸಿದೆ.
ರೋವರ್ ಪ್ರಗ್ಯಾನ್‌ನಲ್ಲಿರುವ ಲೇಸರ್-ಇಂಡ್ಯೂಸ್ಡ್ ಬ್ರೇಕ್ ಡೌನ್ ಸ್ಪೆಕ್ಟ್ರೋಸ್ಕೋಪಿ (LIBS) ಉಪಕರಣದಿಂದ ಮಾಪನಗಳನ್ನು ಮಾಡಲಾಗಿದೆ. ಇದರಲ್ಲಿಯೇ ಅದು ಇರುವುದು ದೃಢಪಟ್ಟಿದೆ. ಕ್ಯಾಲ್ಸಿಯಂ ಮತ್ತು ಕಬ್ಬಿಣ, ಆಮ್ಲಜನಕ ಇರುವುದು ಕೂಡ ದೃಢವಾಗಿದೆ. ಚಂದ್ರನ ಮೇಲ್ಮೈನಲ್ಲಿ ಅಲ್ಯೂಮಿನಿಯಂ (Al), ಸಲ್ಫರ್ (S), ಕ್ಯಾಲ್ಸಿಯಂ (Ca), ಕಬ್ಬಿಣ (Fe), ಕ್ರೋಮಿಯಂ (Cr), ಮತ್ತು ಟೈಟಾನಿಯಂ (Ti) ಇದೆ ಎನ್ನಲಾಗಿದೆ.
ಹೆಚ್ಚಿನ ಮಾಪನಗಳು ಮ್ಯಾಂಗನೀಸ್ (Mn), ಸಿಲಿಕಾನ್ (Si), ಮತ್ತು ಆಮ್ಲಜನಕ (O) ಇರುವುದನ್ನೇ ದೃಢಪಡಿಸಿವೆ. ಸದ್ಯ ಹೈಡ್ರೋಜನ್ ಇರುವಿಕೆ ಕುರಿತು ತನಿಖೆ ನಡೆಯುತ್ತಿದೆ.