ರಾಂಚಿ: ಸೆಲ್ಯೂಟ್ ಹೊಡೆದಿಲ್ಲ ಎಂದು ಜಾರ್ಖಂಡ್ ನ ಕಾಂಗ್ರೆಸ್ ನಾಯಕನ ಪುತ್ರ, ಯುವಕನಿಗೆ ಥಳಿಸಿರುವ ಘಟನೆಯೊಂದು ನಡೆದಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಧನ್ ಬಾದ್ ನಲ್ಲಿ ಕಾಂಗ್ರೆಸ್ ನಾಯಕ ರಣವಿಜಯ್ ಸಿಂಗ್ ಅವರ ಪುತ್ರ ರಣವೀರ್ ಸಿಂಗ್ ಎಂಬಾತನೇ ಹಲ್ಲೆ ನಡೆಸಿದ್ದಾನೆ. ಕಾಂಗ್ರೆಸ್ ಮುಖಂಡನ ಮಗ ತನ್ನ ಸ್ನೇಹಿತರು ಮತ್ತು ವೈಯಕ್ತಿಕ ಅಂಗರಕ್ಷಕನೊಂದಿಗೆ ಸೇರಿ ಬಾಲಕನಿಗೆ ಹಾಕಿ ಸ್ಟಿಕ್‌ಗಳಿಂದ ಹಲ್ಲೆ ನಡೆಸಿದ್ದಾನೆ.
ಅಂಗರಕ್ಷಕರು ಸೇರಿದಂತೆ ಎಲ್ಲರೂ 17 ವರ್ಷದ ಆಕಾಶ್ ಎಂಬ ಯುವಕನಿಗೆ ಒದೆಯುತ್ತಿರುವುದು, ಪಿಸ್ತೂಲ್‌ನಿಂದ ತಲೆಗೆ ಹೊಡೆದಿರುವುದು ಕಂಡು ಬಂದಿದೆ. ಈ ಕುರಿತು ಆಕಾಶ್ ತಂದೆ ಧನ್‌ಬಾದ್‌ನ ಸರಾಯಿಧೆಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.