ಪ್ರಯಾಣಿಕರಿಗಾಗಿ ಕಾಯುತ್ತಿದ್ದ ವಿಮಾನದ ರೆಕ್ಕೆಯ ಮೇಲೆ ಸಿಬ್ಬಂದಿ ಸ್ಟಂಟ್ ಮಾಡಿರುವ ದೃಶ್ಯವೊಂದು ವೈರಲ್ ಆಗಿದೆ.
ವಿಡಿಯೋ ವೈರಲ್ ಆಗುತ್ತಿದ್ದು ನೆಟ್ಟಿಗರು ಕುತೂಹಲದಿಂದ ನೋಡುತ್ತಿದ್ದಾರೆ. ಸ್ವಿಸ್ ಇಂಟರ್‌ನ್ಯಾಶನಲ್ ಏರ್ ಲೈನ್ಸ್‌ನ ಸಿಬ್ಬಂದಿ ಬೋಯಿಂಗ್ 777 ವಿಮಾನದ ರೆಕ್ಕೆಯ ಮೇಲೆ ನರ್ತಿಸುತ್ತ ಫೋಟೋ ತೆಗೆಸಿಕೊಂಡಿದ್ದಾರೆ. ಮೊದಲು ಮಹಿಳಾ ಸಿಬ್ಬಂದಿ ಬಂದಿದ್ದಾರೆ. ಆ ನಂತರ ನಂತರ ಪುರುಷ ಸಿಬ್ಬಂದಿ ಬಂದಿದ್ದಾರೆ. ವಿಡಿಯೋ ನೋಡಿದ ಸ್ವಿಸ್ ಇಂಟರ್ನ್ಯಾಷನಲ್ ಏರ್ಲೈನ್ಸ್ ಆಡಳಿತವು ಆಕ್ರೋಶ ವ್ಯಕ್ತಪಡಿಸಿದೆ.
ಅಲ್ಲದೇ, ವಿಮಾನಯಾನ ಸಂಸ್ಥೆಯು ಇಂಥ ನಡೆವಳಿಕೆಯನ್ನು ಸಹಿಸುವುದಿಲ್ಲ ಎಂದು ಹೇಳಿಕೆಯನ್ನು ನೀಡಿದೆ. ಮೋಜಿಗಾಗಿಯೇ ಮಾಡಿದ್ದರೂ ಜೀವಕ್ಕೆ ಅಪಾಯಕಾರಿಯಾಗಿದೆ ಎಂದು ಸ್ವಿಸ್ ವಕ್ತಾರ ಮೈಕೆಲ್ ಹೇಳಿದ್ದಾರೆ. ಬೋಯಿಂಗ್ 777 ವಿಮಾನದ ರೆಕ್ಕೆಗಳು ಸುಮಾರು ಐದು ಮೀ. (16.4 ಅಡಿ) ಎತ್ತರದಲ್ಲಿವೆ. ಆಯ ತಪ್ಪಿದರೆ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.