Kornersite

International Just In

ದೆಹಲಿಗೆ ಬಂದ ಪಾಕಿಸ್ತಾನಿ ತಂಗಿ!!

ಪ್ರಧಾನಿಗೆ ರಾಖಿ ಕಟ್ಟಲು ನರೇಂದ್ರ ಮೋದಿ (Narendra Modi) ಅವರ ರಾಖಿ ಸಹೋದರಿ ಎಂದು ಕರೆಯುವ ಪಾಕಿಸ್ತಾನಿ ಮೂಲದ ಕಮರ್ ಮೊಹ್ಸಿನ್ ಶೇಖ್ (Qamar Mohsin Sheikh) ನವದೆಹಲಿಗೆ ಬರಲಿದ್ದಾರೆ.

ಕಳೆದ 30 ವರ್ಷಗಳಿಂದ ಪ್ರತಿ ವರ್ಷ ಮೋದಿಗೆ ರಾಖಿ ಕಳುಹಿಸುತ್ತಿದ್ದಾರೆ. ಈ ಬಾರಿ ನಾನೇ ‘ರಾಖಿ’ ಮಾಡಿದ್ದೇನೆ. ಅವರು ಓದಲು ಇಷ್ಟಪಡುವ ಕಾರಣ ನಾನು ಅವರಿಗೆ ಕೃಷಿ ಪುಸ್ತಕವನ್ನೇ ಉಡುಗೊರೆಯಾಗಿ ನೀಡುತ್ತೇನೆ ಎಂದು ಹೇಳಿದ್ದಾರೆ.

ಈ ವಿಷಯವಾಗಿ ಮಾತನಾಡಿರುವ ಮೊಹ್ಸಿನ್, ಅವರಿಗಾಗಿ ಕೆಂಪು ಬಣ್ಣದ ರಾಖಿಯನ್ನು ಮಾಡಿದ್ದೇನೆ. ಕೆಂಪು ಬಣ್ಣವನ್ನು ಶಕ್ತಿಯ ಸಂಕೇತ ಎನ್ನಲಾಗಿದೆ. ಅವರು ಗುಜರಾತ್‌ನ ಮುಖ್ಯಮಂತ್ರಿಯಾಗಬೇಕೆಂದು ಪ್ರಾರ್ಥಿಸಿದ್ದೆ. ಅವರು ಆದರು. ನಾನು ರಾಖಿ ಕಟ್ಟಿದಾಗಲೆಲ್ಲ ಅವರು ಪ್ರಧಾನಿಯಾಗಬೇಕು ಎಂಬ ನನ್ನ ಆಸೆಯನ್ನು ವ್ಯಕ್ತಪಡಿಸುತ್ತಿದ್ದೆ. ಈಗ, ಅವರು ಪ್ರಧಾನಿಯಾಗಿ ದೇಶಕ್ಕಾಗಿ ಶ್ಲಾಘನೀಯ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಕಳೆದ ವರ್ಷ ಪ್ರಧಾನಿಯವರಿಗೆ ರಕ್ಷಾ ಬಂಧನದ ಶುಭಾಶಯಗಳನ್ನು ಕಳುಹಿಸುವಾಗ, ಈ ವರ್ಷ ಅವರನ್ನು ಭೇಟಿಯಾಗಲು ನಾನು ಎದುರು ನೋಡುತ್ತಿದ್ದೇನೆ ಎಂದು ಶೇಖ್ ಹೇಳಿದ್ದರು.

You may also like

International

ಅಮೆರಿಕದಲ್ಲಿ ಭೀಕರ ಸುಂಟರಗಾಳಿ – 7 ಜನ ಸಾವು

Washington : ಅಮೆರಿಕ(America)ದಲ್ಲಿ ಭೀಕರ ಸುಂಟರಗಾಳಿ ಬೀಸಿದ ಪರಿಣಾಮ 7 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ.ಅಮೆರಿಕದ ಅರ್ಕಾನ್ಸಾಸ್‌ (Arkansas) ಮತ್ತು ಇಲಿನಾಯ್ಸ್‌ (Illinois)ರಾಜ್ಯಗಳಲ್ಲಿ ಬೀಸಿದ ಸುಂಟಗಾಳಿಗೆ ಹತ್ತಾರು
International Tech

ಹಾರಿ ಹೋದ ನೀಲಿ ಹಕ್ಕಿ- ಜಾಗ ತುಂಬಿದ ನಾಯಿ

Washington : ಟ್ವಿಟ್ಟರ್ ಸಿಇಓ ಎಲಾನಾ ಮಸ್ಕ್ ಟ್ವಿಟ್ಟರ್ ಖರೀದಿಸಿದಾಗಿನಿಂದ ಹೆಚ್ಚು ಸುದ್ದಿಯಾಗುತ್ತಲೇ ಇದ್ದಾರೆ. ಸದ್ಯ ಲೋಗೋದಿಂದ ನೀಲಿ ಹಕ್ಕಿ ತೆಗೆದು ನಾಯಿ ಚಿತ್ರ ಹಾಕಿದ್ದು, ದೊಡ್ಡ