ಶ್ರಾವಣ ಮಾಸದಲ್ಲಿ ದೇಶ ವಿದೇಶಗಳಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಭರ್ಜರಿಯಾಗಿ ಹೆಚ್ಚಾಗುತ್ತಿವೆ. ಮತ್ತು ಬೆಳ್ಳಿ ಬೆಲೆಗಳು ದೇಶದಲ್ಲಿ ಕೂಡ ಚಿನ್ನದ ಬೆಲೆ ಏರಿಕೆಯಾಗಿದೆ.
ಡಾಲರ್ ಮೌಲ್ಯವೃದ್ಧಿ ಬಳಿಕ ಹೂಡಿಕೆದಾರರು ಚಿನ್ನದಿಂದ ದೂರ ಸರಿದರಾದರೂ ಅದು ತಾತ್ಕಾಲಿಕ ಹಂತ ಎಂಬುದು ರುಜುವಾತಾಗಿದೆ. ದೇಶದಲ್ಲಿ ಸದ್ಯ 10 ಗ್ರಾಮ್ ನ 22 ಕ್ಯಾರಟ್ ಚಿನ್ನದ ಬೆಲೆ 54,700 ರೂ. ಇದೆ. 24 ಕ್ಯಾರಟ್ ನ ಅಪರಂಜಿ ಚಿನ್ನದ ಬೆಲೆ 59,690 ರೂ. ಇದೆ. 100 ಗ್ರಾಂ ಬೆಳ್ಳಿಯ ಬೆಲೆ 7,710 ರೂ. ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ
• 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ: 54,700 ರೂ
• 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ: 59,670 ರೂ
• ಬೆಳ್ಳಿ ಬೆಲೆ 10 ಗ್ರಾಂ 771 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ
• ಮಲೇಷ್ಯಾ: 2,840 ರಿಂಗಿಟ್ (50,617 ರುಪಾಯಿ)
• ದುಬೈ: 2157.50 ಡಿರಾಮ್ (48,636 ರುಪಾಯಿ)
• ಅಮೆರಿಕ: 590 ಡಾಲರ್ (48,847 ರುಪಾಯಿ)
• ಸಿಂಗಾಪುರ: 810 ಸಿಂಗಾಪುರ್ ಡಾಲರ್ (49,435 ರುಪಾಯಿ)
• ಕತಾರ್: 2,225 ಕತಾರಿ ರಿಯಾಲ್ (50,537 ರೂ)
• ಓಮನ್: 234.50 ಒಮಾನಿ ರಿಯಾಲ್ (50,430 ರುಪಾಯಿ)
• ಕುವೇತ್: 185.50 ಕುವೇತಿ ದಿನಾರ್ (49,782 ರುಪಾಯಿ)