Kornersite

Just In National Tech

ಚಂದ್ರನ ಗೆದ್ದು ಸೂರ್ಯ ಶಿಕಾರಿಗೆ ಹೊರಟ ಭಾರತ

ಶ್ರೀಹರಿಕೋಟಾ : ಚಂದ್ರಯಾನ-3 (Chandrayaan-3) ಯಶಸ್ವಿಯಾದ ನಂತರ ಭಾರತ ಈಗ ಸೂರ್ಯ ಶಿಕಾರಿ ಮಾಡಲು ಹೊರಟಿದೆ. ಇಸ್ರೋ (ISRO) ಸಂಸ್ಥೆ ಶ್ರೀಹರಿಕೋಟಾದಲ್ಲಿ ಆದಿತ್ಯ ಎಲ್1 (Aditya L1) ಉಡಾವಣೆ ಮಾಡಿದೆ. ಈ ಮೂಲಕ ಮತ್ತೊಂದು ಐತಿಹಾಸಿಕ ಗಳಿಗಗೆ ಭಾರತ ಕಾರಣವಾಯಿತು.

ಸೂರ್ಯನನ್ನು ಅಧ್ಯಯನ ಮಾಡಲು ಆದಿತ್ಯ ಎಲ್‌-1 ಮಿಷನ್ ಬೆಳಗ್ಗೆ 11.50 ಕ್ಕೆ ಶ್ರೀ ಹರಿಕೋಟಾದ ಸತೀಶ್ ಉಡಾವಣೆ ಕೇಂದ್ರದಿಂದ ಉಡಾವಣೆಯಾಗಿದೆ. ಹೀಗಾಗಿ ಸೂರ್ಯಯಾನ ಈಗ ಆರಂಭವಾಗಿದೆ. ಕೆಲವು ಅಧ್ಯಯನದ ನಂತರ ಎಲ್ 1 ಕಕ್ಷೆ ಹೋಗಲು ವಿಜ್ಞಾನಿಗಳ ತಂಡ ತೀರ್ಮಾನ ಮಾಡಿದ್ದು, ಅದರಂತೆ ಇಂದು ಯಶಸ್ವಿ ಉಡಾವಣೆ ಮಾಡಲಾಗಿದೆ. ಪಿಎಸ್‍ಎಲ್‍ವಿ ಸಿ 57 ಹೆಸರಿನ ಎಕ್ಸ್ಟ್ರಾ ಲಾರ್ಜ್ ರಾಕೆಟ್ ಬರೊಬ್ಬರಿ 1,450 ಕೆ.ಜಿ ತೂಕವಿದ್ದು, ಅಧ್ಯಯನಕ್ಕೆ ಬೇಕಾದ 7 ಉಪಕರಣಗಳನ್ನು ತೆಗೆದುಕೊಂಡು ಹೋಗಿದೆ.

ಸೌರ ಚಟುವಟಿಕೆ ಮತ್ತು ಬಾಹ್ಯಕಾಶ ವಾತಾವರಣದ ಮೇಲಿನ ಪರಿಣಾಮವನ್ನ ಅಧ್ಯಯನ ಮಾಡಲಾಗುತ್ತದೆ. ಉಡಾವಣೆ ಬಳಿಕ ನಿರ್ದಿಷ್ಟ ಸ್ಥಳವಾದ ಎಲ್ 1 ಪಾಯಿಂಟ್ ತಲುಪೋಕೆ ಬರೊಬ್ಬರಿ 120 ದಿನಗಳನ್ನ ತೆಗೆದುಕೊಳ್ಳಲಿದೆ. ಕಕ್ಷೆಯನ್ನ ತಲುಪಿದ ಬಳಿಕ ರಾಕೆಟ್ ಹೊತ್ತೊಯ್ದ 8 ಉಪಕರಣಗಳ ಸ್ವಿಚ್ ಪ್ರೋಗ್ರಾಂಮಿಂಗ್ ಮೂಲಕ ತಮ್ಮ ಕಾರ್ಯವನ್ನ ಆರಂಭಿಸಲಿವೆ. ಭೂಮಿಯಿಂದ 15 ಲಕ್ಷ ಕಿ.ಮೀ ದೂರದಲ್ಲಿರುವ ಈ ಕಕ್ಷೆಯಲ್ಲಿ, ಭೂಮಿ ಮತ್ತು ಸೂರ್ಯನ ಗುರುತ್ವಾಕರ್ಷಣೆಯ ಸಮನಾಗಿರುತ್ತದೆ.

You may also like

National

ರಾಮಲೀಲಾ ಮೈದಾನದಲ್ಲಿ ಜಮಾಯಿಸುತ್ತಿರುವ ರೈತರು

ನವದೆಹಲಿ : ದೇಶದ ಬೇರೆ ಬೇರೆ ರಾಜ್ಯಗಳಿಂದ ರೈತರು ಇಂದು ದೆಹಲಿಯಲ್ಲಿ ಜಮಾಯಿಸುತ್ತಿದ್ದಾರೆ. ವಿವಿಧ ರೈತ ಸಂಘಟನೆಗಳ ಯುನೈಟೆಡ್ ಕಿಸಾನ್ ಮೋರ್ಚಾ (ಎಸ್‌ಕೆಎಂ) ಕೃಷಿ ಉತ್ಪನ್ನಗಳ ಕನಿಷ್ಠ
International Tech

ಹಾರಿ ಹೋದ ನೀಲಿ ಹಕ್ಕಿ- ಜಾಗ ತುಂಬಿದ ನಾಯಿ

Washington : ಟ್ವಿಟ್ಟರ್ ಸಿಇಓ ಎಲಾನಾ ಮಸ್ಕ್ ಟ್ವಿಟ್ಟರ್ ಖರೀದಿಸಿದಾಗಿನಿಂದ ಹೆಚ್ಚು ಸುದ್ದಿಯಾಗುತ್ತಲೇ ಇದ್ದಾರೆ. ಸದ್ಯ ಲೋಗೋದಿಂದ ನೀಲಿ ಹಕ್ಕಿ ತೆಗೆದು ನಾಯಿ ಚಿತ್ರ ಹಾಕಿದ್ದು, ದೊಡ್ಡ