ರಾಜ್ಯ ಸರ್ಕಾರದಿಂದ ಎಂಎಸ್ ಐಎಲ್ ನಲ್ಲಿ ಸಮಗ್ರ ಬದಲಾವಣೆ ತರಲಾಗುತ್ತಿದ್ದು, ರಾಜ್ಯಾದ್ಯಂತ ಉನ್ನತ ದರ್ಜೆಯ 100 ಮದ್ಯ ಮಾರಾಟ ಮಳಿಗೆಗಳನ್ನು ತೆರೆಯಲು ಯೋಜನೆ ರೂಪಿಸಲಾಗುತ್ತಿದೆ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಮೊದಲ ಹಂತದಲ್ಲಿ 30 ಮಳಿಗೆಗಳನ್ನು ಆರಂಭಿಸಲಾಗುತ್ತಿದ್ದು, ಈ ಪೈಕಿ 10 ಮಳಿಗೆಗಳು ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ತೆರೆಯಲಾಗುವುದು. ಅಲ್ಲದೇ, ಸಂಸ್ಥೆಯ ಚಿಟ್ ಫಂಡ್ ನಲ್ಲೂ ಹಲವಾರು ಸುಧಾರಣೆ ತರಲಾಗುತ್ತಿದೆ. ಜನರ ಹಣವನ್ನು ಕಾಳಜಿಯಿಂದ ನಿರ್ವಹಿಸಲಾಗುತ್ತದೆ. ಲೇಖಕ್ ನೋಟ್ ಪುಸ್ತಕದ ಬ್ರ್ಯಾಂಡ್ ಗೆ ಹೊಸ ರೂಪ ನೀಡಲಾಗುತಿದೆ. ಸ್ಯಾಂಡಲ್ ಸೋಪ್ ನ ಹಿರಿಮೆ ಹೆಚ್ಚಿಸಲಾಗುತ್ತಿದೆ ಎಂದು ಹೇಳಿದ್ದಾರೆ.