ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಕರ್ನಾಟಕದ ದೇವಾಲಯಗಳು ಸ್ಥಾನ ಪಡೆದಿದ್ದು, ಕನ್ನಡಿಗರು ಹೆಮ್ಮೆ ಪಡುವಂತಾಗಿದೆ.
ಹಾಸನ ಜಿಲ್ಲೆಯ ಬೇಲೂರಿನಲ್ಲಿರುವ ಚನ್ನಕೇಶವ ದೇವಸ್ಥಾನ ಮತ್ತು ಹಳೆಬೀಡಿನಲ್ಲಿರುವ ಹೊಯ್ಸಳೇವರ ದೇವಸ್ಥಾನ, ಮೈಸೂರು ಜಿಲ್ಲೆಯ ಸೋಮನಾಥಪುರದಲ್ಲಿನ ಕೇಶವ ದೇವಸ್ಥಾನಗಳು ಸ್ಥಾನ ಪಡೆದಿವೆ.
ವಿಶ್ವ ಪರಂಪರೆ ತಾಣಗಳ ಪಟ್ಟಿಗೆ 2022-23ರಲ್ಲಿ ಸೇರಿಸುವ ಕುರಿತು ಕೇಂದ್ರದ ಸಂಸ್ಕೃತಿ ಮತ್ತು ಪ್ರಾಚ್ಯವಸ್ತು ಸರ್ವೇಕ್ಷಣಾಲಯ ಸಚಿವಾಲಯ ಭಾರತದಿಂದ ನಾಮನಿರ್ದೇಶನ ಮಾಡಿ ಕಳುಹಿಸಿತ್ತು. ಕೇಂದ್ರದ ಸಂಸ್ಕೃತಿ, ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಈಶಾನ್ಯ ಪ್ರದೇಶ ಅಭಿವೃದ್ಧಿ ಖಾತೆಯ ರಾಜ್ಯ ಸಚಿವ ಜಿ.ಕಿಷನ್ ರೆಡ್ಡಿ ಈ ವಿಚಾರವನ್ನು ಅಂದಿನ ಟ್ವಿಟ್ಟರ್ (ಪ್ರಸ್ತುತ ಎಕ್ಸ್) ನಲ್ಲಿ ತಿಳಿಸಿದ್ದರು.
12-13 ನೇ ಶತಮಾನದಲ್ಲಿ ನಿರ್ಮಿಸಲಾದ ಹೊಯ್ಸಳರ ಶೈಲಿಯ ಶಿಲ್ಪಕಲಾ ಶೈಲಿಯ ದೇಗುಲಗಳು, ಬೇಲೂರು, ಹಳೇಬೀಡು ಮತ್ತು ಸೋಮನಾಥಪುರದ ದೇವಾಲಯಗಳು ಈಗ ಪಟ್ಟಿಯಲ್ಲಿ ಸೇರಿವೆ.