ದೇಶದ ರೈತರಿಗೆ ಕೇಂದ್ರ ಸರ್ಕಾರವು ಗಣೇಶ ಹಬ್ಬದ ಉಡುಗೊರೆ ಎಂಬಂತೆ ರೈತರಿಗೆ ಕೃಷಿ ಸಾಲ ಹಾಗೂ ಬೆಳೆ ವಿಮೆಗೆ ಒತ್ತು ನೀಡುವ ಹಲವಾರು ಹೊಸ ಯೋಜನೆಗಳಿಗೆ ಚಾಲನೆ ಸಿಗಲಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ರೈತರಿಗೆ ಕೃಷಿ ಸಾಲ ಮತ್ತು ಬೆಳೆ ವಿಮೆಗೆ ಒತ್ತು ನೀಡುವ ಹಲವಾರು ಹೊಸ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಕೃಷಿ ಹಾಗೂ ರೈತರ ಕಲ್ಆಮ ಸಚಿವಾಲಯವು ದೇಶದಲ್ಲಿ ಕೃಷಿಯಲ್ಲಿ ಕ್ರಾಂತಿ ಮಾಡಲು ಈ ಯೋಜನೆ ಜಾರಿಗೊಳಿಸಲಾಗುತ್ತಿದೆ. ಆರ್ಥಿಕ ಸೇರ್ಪಡೆ ಹೆಚ್ಚಿಸುವುದು, ಡೇಟಾ ಬಳಕೆ ಸುಗಮಗೊಳಿಸುವುದು, ತಂತ್ರಜ್ಞಾನ ಬಳಸಿಕೊಳ್ಳುವುದರ ಮೂಲಕ ರೈತರ ಜೀವನ ಸುಧಾರಿಸುವ ಗುರಿಯನ್ನು ಇವು ಹೊಂದಿವೆ.
ಕಿಸಾನ್ ಕ್ರೆಡಿಟ್ ಪ್ಲಾಟ್ ಫಾರ್ಮ್ ರೈತರ ಡೇಟಾ, ಸಾಲ ವಿತರಣೆಯ ನಿರ್ದಿಷ್ಟತೆಗಳು, ಬಡ್ಡಿ ಸಬ್ವೆನ್ಶನ್ ಕ್ಲೈಮ್ ಗಳು ಹಾಗೂ ಸ್ಕೀಮ್ ಬಳಕೆಯ ಪ್ರಗತಿಯ ಸಮಗ್ರ ನೋಟವನ್ನು ನೀಡುತ್ತದೆ. ಹೆಚ್ಚು ಕೇಂದ್ರೀಕೃತ ಹಾಗೂ ಪರಿಣಾಮಕಾರಿ ಕೃಷಿ ಸಾಲಕ್ಕಾಗಿ ಬ್ಯಾಂಕ್ ಗಳೊಂದಿಗೆ ತಡೆ ರಹಿತ ಏಕೀಕರಣ ಉತ್ತೇಜಿಸಲಾಗುತ್ತಿದೆ.
ಪ್ರತಿಯೊಬ್ಬ ರೈತರಿಗೆ ಯೋಜನೆಯ ಪ್ರಯೋಜನಗಳನ್ನು ವಿಸ್ತರಿಸಲು ಘರ್ ಘರ್ ಕೆಸಿಸಿ ಅಭಿಯಾನ ಅಡಿಯಲ್ಲಿ ಮನೆ ಮನೆಗೆ ಪ್ರಚಾರವನ್ನು ಪ್ರಾರಂಭಿಸಲಾಗುವುದು. ಈ ಅಭಿಯಾನ ಸಾರ್ವತ್ರಿಕ ಆರ್ಥಿಕ ಒಳಗೊಳ್ಳುವಿಕೆಯ ಗುರಿ ಹೊಂದಿದೆ.