ಕೆನಡಾ, ಭಾರತದ ವಿರುದ್ಧ ಗಂಭೀರ ಆರೋಪ ಮಾಡುತ್ತಿದೆ. ಖಲಿಸ್ತಾನಿ (Khalistani) ಭಯೋತ್ಪಾದಕನ ಹತ್ಯೆಯಲ್ಲಿ ಭಾರತದ (India) ಕೈವಾಡವಿದೆ ಎಂದು ಆರೋಪ ಮಾಡಿದೆ.
ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ (Justin Trudeau), ಹೌಸ್ ಆಫ್ ಕಾಮನ್ಸ್ ಉದ್ದೇಶಿಸಿ ಮಾತನಾಡಿ, ಜೂನ್ನಲ್ಲಿ ಬ್ರಿಟಿಷ್ ಕೊಲಂಬಿಯಾದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಾಗಿದೆ. ಈ ಕೊಲೆಯಲ್ಲಿ ಭಾರತೀಯ ಏಜೆಂಟರ ಕೈವಾಡದ ಪ್ರಬಲ ಆರೋಪಗಳು ಇವೆ ಎಂದು ಆರೋಪಿಸಿದ್ದಾರೆ.
ಆರೋಪ ಕೇಳಿ ಬಂದ ಬೆನ್ನಲ್ಲೇ ನವದೆಹಲಿಯ ಗುಪ್ತಚರ ಮುಖ್ಯಸ್ಥರನ್ನು ಉಚ್ಛಾಟಿಸಿದೆ. ಕೆನಡಾದ ಈ ರಾಜತಾಂತ್ರಿಕ ಕ್ರಮವು ಒಟ್ಟಾವಾ ಮತ್ತು ದೆಹಲಿ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಂತಾಗಿದೆ. ಕೆನಡಾದ (Canada) ವಿದೇಶಾಂಗ ಸಚಿವೆ ಮೆಲಾನಿ ಜೋಲೀ ಪ್ರತಿಕ್ರಿಯಿಸಿ, ಟ್ರುಡೊ ಸರ್ಕಾರವು ತಕ್ಷಣದ ಕ್ರಮ ಕೈಗೊಂಡಿದೆ ಎಂದು ತಿಳಿಸಿದ್ದಾರೆ. ಜೂನ್ 18 ರಂದು ಹರ್ದೀಪ್ ಸಿಂಗ್ ನಿಜ್ಜರ್ ಮೇಲೆ ಗುಂಡು ಹಾರಿಸಲಾಗಿತ್ತು. ಭಾರತವು ಈತನನ್ನು ಮೋಸ್ಟ್ ವಾಂಟೆಡ್ ಭಯೋತ್ಪಾದಕ ಎಂದು ಘೋಷಿಸಿತು ಎಂಬುವುದು ಉಲ್ಲೇಖ.