ಬಾಂಗ್ಲಾದೇಶದ ಮಾಜಿ ಟೆಸ್ಟ್ ಆಟಗಾರ ನಾಸಿರ್ ಹುಸೇನ್ ಕೂಡ ಲೀಗ್’ನ ಭ್ರಷ್ಟಾಚಾರ-ವಿರೋಧಿ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪ ಮಾಡಲಾಗಿದೆ.
2021ರ ಎಮಿರೇಟ್ಸ್ ಟಿ 10 ಲೀಗ್’ನಲ್ಲಿ ಭ್ರಷ್ಟ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಎಂಟು ಆಟಗಾರರು, ಅಧಿಕಾರಿಗಳು ಮತ್ತು ಕೆಲವು ಭಾರತೀಯ ತಂಡದ ಮಾಲೀಕರ ವಿರುದ್ಧ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವಿವಿಧ ಆರೋಪಗಳನ್ನು ಹೊರಿಸಿದೆ. ಪರಾಗ್ ಸಾಂಘ್ವಿ ಮತ್ತು ಕೃಷ್ಣ ಕುಮಾರ್ ಈ ಪಟ್ಟಿಯಲ್ಲಿದ್ದಾರೆ.
ಸಾಂಘ್ವಿ ಪಂದ್ಯದ ಫಲಿತಾಂಶಗಳು ಮತ್ತು ಇತರ ಅಂಶಗಳ ಮೇಲೆ ಬೆಟ್ಟಿಂಗ್ ಮತ್ತು ತನಿಖಾ ಸಂಸ್ಥೆಗೆ ಸಹಕರಿಸುತ್ತಿಲ್ಲ, ಕೃಷ್ಣ ಕುಮಾರ್ ಅವರು DACO ದಿಂದ ವಿಷಯಗಳನ್ನು ಮರೆಮಾಚಿದ್ದಾರೆ ಎಂಬ ಆರೋಪ ಮಾಡಿದ್ದಾರೆ.
ಅಮಾನತುಗೊಂಡಿರುವ ಇತರರಲ್ಲಿ ಬ್ಯಾಟಿಂಗ್ ಕೋಚ್ ಅಜರ್ ಜೈದಿ, ಯುಎಇ ದೇಶೀಯ ಆಟಗಾರರಾದ ರಿಜ್ವಾನ್ ಜಾವೇದ್ ಮತ್ತು ಸಾಲಿಯಾ ಸಮನ್ ಮತ್ತು ತಂಡದ ಮ್ಯಾನೇಜರ್ ಶಾದಾಬ್ ಅಹ್ಮದ್ ಸೇರಿದ್ದಾರೆ. ಹೀಗಾಗಿ 6 ಜನರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ.