ಸಂಗಾತಿಯೊಂದಿಗೆ ಲೈಂಗಿಕ ಸಂಬಂಧ ಹೊಂದಲು ಉದ್ಧೇಶಪೂರ್ವಕವಾಗಿ ನಿರಾಕರಿಸುವುದು ಕ್ರೂರತೆಯಾಗುತ್ತದೆ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಮದುವೆಯಾದ 35 ದಿನಕ್ಕೆ ಬೇರೆ ಬೇರೆಯಾದ ದಂಪತಿಗೆ ವಿಚ್ಛೇತನ ನೀಡಿದ್ದನ್ನು ಎತ್ತಿ ಹಿಡಿದ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ವಿಚ್ಛೇದನ ನೀಡಿದ್ದ ಕೌಟುಂಬಿಕ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈತ್ ನೇತೃತ್ವದ ನ್ಯಾಯಪೀಠವು ತಿರಸ್ಕರಿಸಿದೆ. ಈ ಸಂದರ್ಭದಲ್ಲಿ ಲೈಂಗಿಕತೆ ಇಲ್ಲದ ವಿವಾಹ ಸಂಬಂಧ ಅಸಹನೀಯ. ಲೈಂಗಿಕ ಸಂಬಂಧದ ಕುರಿತು ನಿರಾಶೆ ವೈವಾಹಿಕ ಸಂಬಂಧಕ್ಕೆ ಮಾರಕವಾಗುವಂತಹ ಬೇರೆ ವಿಷಯವೂ ಇಲ್ಲ ಎಂದು ಹೇಳಿದೆ ಎನ್ನಲಾಗಿದೆ.
ದಂಪತಿ 2004ರಲ್ಲಿ ಹಿಂದೂ ಪದ್ಧತಿಯ ಪ್ರಕಾರ ಮದುವೆಯಾಗಿದ್ದರು. ನಂತರ ಪತ್ನಿ ತವರು ಮನೆಗೆ ತೆರಳಿದವರು ಮರಳಿ ಬಂದಿರಲಿಲ್ಲ. ಹೀಗಾಗಿ ಪತನಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇದರ ನಂತರ ಪತ್ನಿಯೂ ವರದಕ್ಷಿಣೆ ಕಿರುಕುಳ ನೀಡಿದ್ದಾಗಿ ಪ್ರತಿ ದೂರು ನೀಡಿದ್ದರು.