Kornersite

International Just In National

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ; ದಾಖಲೆಯ ಮಟ್ಟಕ್ಕೆ ಏರಿದ ಕಚ್ಚಾ ತೈಲ!

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿರುವುದರಿಂದ ಡಾಲರ್ ಎದುರು ರೂಪಾಯಿ ಮೌಲ್ಯ ದಾಖಲೆಯ 83.267ಕ್ಕೆ ಕುಸಿತ ಕಂಡಿದೆ.

ಜಾಗತಿಕ ಮಾರುಕಟ್ಟೆಗಳಲ್ಲಿನ ತೈಲ ಬೆಲೆಗಳು ಈಗ ಬ್ಯಾರೆಲ್ ಗೆ 95 ಡಾಲರ್ ಗಡಿ ದಾಟುತ್ತಿವೆ. ಹೀಗಾಗಿ ರೂಪಾಯಿ ಮೌಲ್ಯ ಉತ್ತೇಜಿಸಲು ಆರ್ ಬಿಐ ಮಾರುಕಟ್ಟೆಯಲ್ಲಿ ಡಾಲರ್ ಗಳನ್ನು ಬಿಡುಗಡೆ ಮಾಡುತ್ತಿದ್ದರೂ ದೇಶವು ತನ್ನ ಕಚ್ಚಾ ತೈಲ ಅಗತ್ಯದ ಶೇ. 85ರಷ್ಟು ಆಮದು ಮಾಡಿಕೊಳ್ಳುವುದರಿಂದ ಭಾರತೀಯ ಕರೆನ್ಸಿ ಕುಸಿತ ತಡೆಯಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.

ವೀದೇಶಿ ವಿನಿಮಯ ಮೀಸಲುಗಳ ಸಾಕಷ್ಟು ಸಂಗ್ರಹ ಹೊಂದಿರುವ ಆರ್ ಬಿಐ ರೂಪಾಯಿ ಮೌಲ್ಯವನ್ನು ಎತ್ತಿ ಹಿಡಿಯಲು ಪ್ರಯತ್ನ ಮಾಡುತ್ತಿದೆ. ಆದರೆ, ರೂಪಾಯಿ ಮೌಲ್ಯ ಕುಸಿತವು ಒಂದು ಹಂತ ಮೀರಿ ಹೋದರೆ ಏನು ಮಾಡಲು ಆಗಲ್ಲ ಎನ್ನಲಾಗುತ್ತಿದೆ. ಷೇರು ಮಾರುಕಟ್ಟೆಗಳಲ್ಲಿನ ವಿದೇಶಿ ಹೂಡಿಕೆಗಳು ರೂಪಾಯಿ ಇಳಿಕೆಯನ್ನು ನಿಯಂತ್ರಿಸಲು ಸಹಾಯ ಮಾಡಿವೆ. ಆದರೆ, ಇದು ಚಂಚಲ ಪ್ರವೃತ್ತಿಯ ಹಣವಾಗಿದ್ದು, ಯಾವಾವ ಬೇಕಾದರೂ ಇದು ಹೊರಹೋಗಬಹುದು. ಹೀಗಾಗಿ ಇದನ್ನು ಅವಲಂಬಿಸಲಾಗುವುದಿಲ್ಲ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.

ಸೌದಿ ಅರೇಬಿಯಾ ಹಾಗೂ ರಷ್ಯಾ ಕಚ್ಚಾ ತೈಲ ಪೂರೈಕೆಯ ಪ್ರಮಾಣದಲ್ಲಿ ಕಡಿತ ಮಾಡಿರುವುದನ್ನು ಈ ವರ್ಷದ ಅಂತ್ಯದವರೆಗೆ ವಿಸ್ತರಿಸಲು ನಿರ್ಧರಿಸಿದ ತೈಲ ಬೆಲೆಗಳು ಕಳೆದ ಮೂರು ವಾರಗಳಿಂದ ಸತತವಾಗಿ ಏರುತ್ತಿವೆ ಹಾಗೂ ನವೆಂಬರ್ ನಂತರದ ಗರಿಷ್ಠ ಮಟ್ಟ ತಲುಪಿವೆ.

You may also like

National

ರಾಮಲೀಲಾ ಮೈದಾನದಲ್ಲಿ ಜಮಾಯಿಸುತ್ತಿರುವ ರೈತರು

ನವದೆಹಲಿ : ದೇಶದ ಬೇರೆ ಬೇರೆ ರಾಜ್ಯಗಳಿಂದ ರೈತರು ಇಂದು ದೆಹಲಿಯಲ್ಲಿ ಜಮಾಯಿಸುತ್ತಿದ್ದಾರೆ. ವಿವಿಧ ರೈತ ಸಂಘಟನೆಗಳ ಯುನೈಟೆಡ್ ಕಿಸಾನ್ ಮೋರ್ಚಾ (ಎಸ್‌ಕೆಎಂ) ಕೃಷಿ ಉತ್ಪನ್ನಗಳ ಕನಿಷ್ಠ
International

ಅಮೆರಿಕದಲ್ಲಿ ಭೀಕರ ಸುಂಟರಗಾಳಿ – 7 ಜನ ಸಾವು

Washington : ಅಮೆರಿಕ(America)ದಲ್ಲಿ ಭೀಕರ ಸುಂಟರಗಾಳಿ ಬೀಸಿದ ಪರಿಣಾಮ 7 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ.ಅಮೆರಿಕದ ಅರ್ಕಾನ್ಸಾಸ್‌ (Arkansas) ಮತ್ತು ಇಲಿನಾಯ್ಸ್‌ (Illinois)ರಾಜ್ಯಗಳಲ್ಲಿ ಬೀಸಿದ ಸುಂಟಗಾಳಿಗೆ ಹತ್ತಾರು