Kornersite

Crime Karnataka State

ಹಾಲಶ್ರೀ ಹಿಡಿದಿದ್ದೇ ರೋಚಕ; ಕಾವಿ ವೇಷ ತೊಟ್ಟು ಹಿಡಿದ ಅಧಿಕಾರಿಗಳು!

ಚೈತ್ರಾ ಕುಂದಾಪೂರ ವಂಚನೆಯ ಮೂರನೇ ಆರೋಪಿಯಾಗಿರುವ ಹಾಲಶ್ರೀ ಕೊನೆಗೂ ಪೊಲೀಸರ ಅತಿಥಿಯಾಗಿದ್ದು, ಅವರನ್ನು ಸೆರೆ ಹಿಡಿದಿರುವುದೇ ಬಲು ರೋಚಕವಾಗಿದೆ.

ವೇಷ ಬದಲಿಸಿದ್ದ ಹಾಲಶ್ರೀ ಹಿಡಿಯುವುದಕ್ಕಾಗಿ ಸಿಸಿಬಿ ಪೊಲೀಸರು ಕೂಡ ವೇಷ ಬದಲಾಯಿಸಿದ್ದರು. ಆತ ಕಾವಿ ಬದಲಿಸಿದ್ದರೆ, ಇವರು ಖಾಕಿ ಬದಲಿಸಿದ್ದರು. ಮಡಿತೊಟ್ಟು ಅಖಾಡಕ್ಕೆ ಇಳಿದು ಬಂಧಿಸಿದ್ದಾರೆ. ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದ ಹಾಲಶ್ರೀ ಹೈದರಾಬಾದ್ (Hyderabad) ನಿಂದ ಉತ್ತರ ಭಾರತದ ಕಡೆಗೆ ಹೋಗಿರುವ ಮಹಾತಿಯು ಸಿಸಿಬಿ ಅಧಿಕಾರಿಗಳಿಗೆ ಸಿಕ್ಕಿತ್ತು. ಹಾಲಶ್ರೀ ಮಠಗಳು, ದೇವಸ್ಥಾನಗಳಲ್ಲಿ ಇರಬಹುದೆಂಬ ಮಾಹಿತಿ ಆಧಾರದಲ್ಲಿ ಸಿಸಿಬಿಯ ಶಿವಕುಮಾರ್, ರಾಘವೇಂದ್ರ, ಸುರೇಶ್, ಅಣ್ಣಪ್ಪ ಅರ್ಚಕರ ವೇಷ ಹಾಕಿದ್ದರು. ಶೃಂಗೇರಿ ದೇವಸ್ಥಾನದ ಅರ್ಚಕರ ರೀತಿ ಮಡಿಬಟ್ಟೆ ತೊಟ್ಟು ಬಂಧಿಸಲು ಮುಂದಾಗಿದ್ದರು.

ಪ್ರತಿಯೊಂದು ದೇವಸ್ಥಾನ, ಮಠಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವ ನಾಟಕವಾಡಿದ್ದರು. ಹೀಗೆ ಹಲವೆಡೆ ಪೂಜೆ ಮುಗಿಸಿ ಒಡಿಶಾದ ಪೂರಿ ಜಗನ್ನಾಥ್ ದೇವಸ್ಥಾನಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಹಾಲಶ್ರೀ ಅಲ್ಲಿರುವುದು ಪತ್ತೆಯಾಗಿತ್ತು. ಇದು ತಿಳಿದ ಹಾಲಶ್ರೀ ಕೂಡಲೇ ಒಡಿಸ್ಸಾದ (Odisha) ಭುವನೇಶ್ವರದಿಂದ ಬಿಹಾರದ (Bihar) ಭೋದ್ಗಯ್‍ಗೆ ರೈಲು ಟಿಕೆಟ್ ಬುಕ್ ಮಾಡಿದ್ದರು. ನಂತರ ರೈಲ್ವೆ ನಿಲ್ದಾಣಕ್ಕೆ ಪೊಲೀಸರು ಬರಬಹುದು ಎಂಬ ಶಂಕೆಯಿಂದ ಕಟಕ್ ರೈಲ್ವೆ ನಿಲ್ದಾಣಕ್ಕೆ (Katak Railway Station) ಬಸ್‍ನಲ್ಲಿ ಪಯಾಣಿಸಿದ್ದರು. ಆಗ ಕಟಕ್ ರೈಲ್ವೆ ನಿಲ್ದಾಣದ ಪೊಲೀಸರಿಗೆ ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದರು. ಕಟಕ್ ರೈಲ್ವೆ ನಿಲ್ದಾಣಕ್ಕೆ ಹಾಲಶ್ರೀ ಬರುತ್ತಿದ್ದಂತೆ ಒಡಿಸ್ಸಾ ಪೊಲೀಸರು ಬಂಧಿಸಿದ್ದಾರೆ.

You may also like

Crime Karnataka State

ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಗಲಾಟೆ

ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ.
Crime

ಬೈಕ್ ನಲ್ಲಿಯೇ ಸಹೋದರಿಯ ಶವ ಸಾಗಿಸಿದ ಅಣ್ಣ!

ನವದೆಹಲಿ : ಆಂಬುಲೆನ್ಸ್ ಬರುವುದಕ್ಕೆ ನಿರಾಕರಿಸಿರುವ ಹಿನ್ನೆಲೆಯಲ್ಲಿ ಯುವಕನೊಬ್ಬ ತನ್ನ ಸಹೋದರಿಯ ಮೃತ ದೇಹವನ್ನು ಬೈಕ್ ನಲ್ಲಿಯೇ ತೆಗೆದುಕೊಂಡು ಹೋಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಕೌಶಾಂಬಿಯಲ್ಲಿ