ಹಿಮಾಲಯದಲ್ಲಿ ಇರುವ ಕ್ರೀಡಾ ಜಡಿ ಎಂಬ ಹೆಸರಿನ ಗಿಡಮೂಲಿಕೆಯೊಂದು ಸದ್ಯ ಭಾರೀ ಸದ್ದು ಮಾಡುತ್ತಿದೆ. ಇದು ತನ್ನ ಶಕ್ತಿಯಿಂದಾಗಿ ಎಲ್ಲರ ಗಮನ ಸೆಳೆಯುತ್ತಿದೆ. ಇದನ್ನು ಕ್ಯಾಟರ್ಪಿಲ್ಲರ್ ಫಂಗಲ್ ಎಂದು ಕೂಡ ಕರೆಯುತ್ತಾರೆ. ಈ ಗಿಡಮೂಲಿಕೆಯು ಸಾಕಷ್ಟು ಪ್ರಯೋಜನವಾಗುತ್ತಿದೆ.
ನೀರಿನಲ್ಲಿ ಕುಸಿದ ಬಳಿಕ ಇದನ್ನು ಸಾಮಾನ್ಯವಾಗಿ ಚಹಾ ಅಥವಾ ಸೂಪ್ ನ ರೀತಿಯಲ್ಲಿ ಸೇವಿಸಬಹುದು. ಪಿತ್ತಜನಕಾಂಗದ ಕಾಯಿಲೆ, ನಿತ್ರಾಣ, ಕ್ಯಾನ್ಸರ್ ಸೇರಿದಂತೆ ಸಾಕಷ್ಟು ಕಾಯಿಲೆಗಳಿಗೆ ಇದರಿಂದ ಪ್ರಭಲ ಪರಿಹಾರ ಸಿಗುತ್ತದೆ ಎನ್ನಲಾಗುತ್ತಿದೆ. ಇದು ಕಾಯಿಲೆ ಗುಣಪಡಿಸುವುದರೊಂದಿಗೆ ಚೈತನ್ಯವನ್ನೂ ನೀಡುತ್ತದೆ. ಹೀಗಾಗಿ ಇದಕ್ಕೆ ಸಾಕಷ್ಟು ಬೇಡಿಕೆ ಇದೆ.
ಸಾಮಾನ್ಯವಾಗಿ ಪರ್ವತ ಪ್ರದೇಶಗಳಲ್ಲಿ ಇದು ಬೆಳೆಯುತ್ತದೆ. ಭೂತಾನ್, ಭಾರತ, ಚೀನಾ ಹಾಗೂ ನೇಪಾಳದಲ್ಲಿ ಇದು ಕಾಣ ಸಿಗುತ್ತದೆ. 3300 ಮೀಟರ್ ಗಳಿಂದ 4500 ಮೀಟರ್ ಎತ್ತರವಿರುವ ಜಾಗಗಳಲ್ಲಿ ಇದು ಹೆಚ್ಚಾಗಿ ಕಾಣುತ್ತದೆ. ಇದು ಸಾಮಾನ್ಯವಾಗಿ 21 ಡಿಗ್ರಿ ಸೆಲ್ಸಿಯಸ್ ಗಿಂತಲೂ ಕಡಿಮೆ ತಾಪಮಾನದಲ್ಲಿ ಬೆಳೆಯುತ್ತದೆ. ಇದಕ್ಕೆ ಸಾಕಷ್ಟು ಬೇಡಿಕೆಯಿದ್ದು, 1 ಕೆಜಿಗೆ ಬರೋಬ್ಬರಿ 70 ಲಕ್ಷ ರೂ.ಗೆ ಮಾರಾಟವಾಗುತ್ತಿದೆ. ಇದನ್ನು ಕೇಳಿ ಜನ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.