Kornersite

International Just In Sports

ಪ್ರಧಾನಿ ಪ್ರತಿನಿಧಿಸುತ್ತಿರುವ ಕ್ಷೇತ್ರದಲ್ಲಿ ಸಿದ್ಧವಾಗಲಿದೆ ಅಂತಾರಾಷ್ಟ್ರೀಯ ಕ್ರೀಡಾಂಗಣ!

ಉತ್ತರ ಪ್ರದೇಶ : ವಾರಣಾಸಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ತಲೆ ಎತ್ತಲಿದ್ದು, ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ವಾರಣಾಸಿ ಎಂಬುವುದು ಹಿಂದುಗಳ ಪಾಲಿಗೆ ಗೌರವ ಹಾಗೂ ಭಕ್ತಿಯ ಕೇಂದ್ರ. ಕೇವಲ ಧಾರ್ಮಿಕ ಕ್ಷೇತ್ರವಾಗಿದ್ದ ವಾರಣಾಸಿ ಇನ್ನು ಮುಂದೆ ಕ್ರಿಕೆಟ್ ಪ್ರೇಮಿಗಳ ನೆಚ್ಚಿನ ತಾಣವಾಗಲಿದೆ.

ಸುಮಾರು 450 ಕೋಟಿ ರೂಪಾಯಿ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ನಾಳೆ (ಸೆಪ್ಟೆಂಬರ್ 23) ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದು 30 ಸಾವಿರ ಪ್ರೇಕ್ಷಕರನ್ನು ಹೊಂದಬಹುದಾದ ದೊಡ್ಡ ಕ್ರೀಡಾಂಗಣವಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಬಿಸಿ) ಮತ್ತು ಯುಪಿಸಿಎ ಸಕ್ರಿಯದಲ್ಲಿ ನಡೆಯುವ ಯೋಜನೆಯಾಗಿದೆ.

ಈ ಯೋಜನೆಯ ಭೂಸ್ವಾಧೀನಕ್ಕಾಗಿ ರಾಜ್ಯ ಸರ್ಕಾರ 120 ಕೋಟಿ ರೂ. ವ್ಯಯಿಸಿದೆ. ಕ್ರೀಡಾಂಗಣ ನಿರ್ಮಾಣಕ್ಕೆ 330 ಕೋಟಿ ರೂ. ಖರ್ಚಾಗಲಿದೆ. ಒಟ್ಟು ಸರಿಸುಮಾರು 450 ಕೋಟಿ ರೂ.ಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ.

You may also like

Sports

ಡಿವೈನ್ ಭರ್ಜರಿ ಆಟಕ್ಕೆ ಮಂಕಾದ ಜೈಂಟ್ಸ್!

ಮುಂಬಯಿ : ಆಲ್‌ ರೌಂಡರ್‌ ಸೋಫಿ ಡಿವೈನ್‌ ಭರ್ಜರಿ ಆಟಕ್ಕೆ ಗುಜರಾತ್ ಜೈಂಟ್ಸ್ ತಂಡವು ಸೋಲು ಒಪ್ಪಿಕೊಳ್ಳುವಂತಾಯಿತು.ಗುಜರಾತ್‌ ಜೈಂಟ್ಸ್‌ ವಿರುದ್ಧ ಆರ್ ಸಿಬಿ 8 ವಿಕೆಟ್‌ ಗಳ
International

ಅಮೆರಿಕದಲ್ಲಿ ಭೀಕರ ಸುಂಟರಗಾಳಿ – 7 ಜನ ಸಾವು

Washington : ಅಮೆರಿಕ(America)ದಲ್ಲಿ ಭೀಕರ ಸುಂಟರಗಾಳಿ ಬೀಸಿದ ಪರಿಣಾಮ 7 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ.ಅಮೆರಿಕದ ಅರ್ಕಾನ್ಸಾಸ್‌ (Arkansas) ಮತ್ತು ಇಲಿನಾಯ್ಸ್‌ (Illinois)ರಾಜ್ಯಗಳಲ್ಲಿ ಬೀಸಿದ ಸುಂಟಗಾಳಿಗೆ ಹತ್ತಾರು