Kornersite

Just In National

ರಾಷ್ಟ್ರ ರಾಜಧಾನಿಯಲ್ಲಿ ಪಟಾಕಿ ನಿಷೇಧ!

ದೆಹಲಿ : ದೆಹಲಿಯಲ್ಲಿ ಪಟಾಕಿ ಬಳಕೆ ನಿಷೇಧಿಸಲಾಗಿದೆ.

ಅರವಿಂದ್ ಕೇಜ್ರಿವಾಲ್ (Delhi CM Arvind Kejriwal) ನೇತೃತ್ವದ ಸರ್ಕಾರ ಪಟಾಕಿ ಬಳಕೆ ನಿಷೇಧಿಸಿದ ಬೆನ್ನಲ್ಲಿಯೇ ಸುಪ್ರೀಂ ಕೋರ್ಟ್ (Supreme Court On Ban Crackers) ಬೆಂಬಲ ವ್ಯಕ್ತಪಡಿಸಿ, ಮಧ್ಯ ಪ್ರವೇಶಿಸಲು ನಿರಾಕರಿಸಿದೆ.

ಬೇರಿಯಂ ಬಳಸಿ ತಯಾರಿಸುವ ಹಸಿರು ಪಟಾಕಿಗಳ ಬಳಕೆಗೆ ಕೋರಿ ಸಲ್ಲಿಸಿದ ಮನವಿಯನ್ನೂ ದೇಶದ ಅತ್ಯುನ್ನತ ಕೋರ್ಟ್ ತಿರಸ್ಕರಿಸಿ ಸಾರ್ವಜನಿಕರಿಗೆ ದೀಪಾವಳಿಯ ಶುಭಾಶಯ ಹೇಳಿದೆ. ರಾಜಧಾನಿಯಲ್ಲಿ ಪಟಾಕಿ ಮಾರಾಟಕ್ಕೆ ತಾತ್ಕಾಲಿಕ ಪರವಾನಗಿ ನೀಡದಂತೆ ಸುಪ್ರೀಂ ಕೋರ್ಟ್, ದೆಹಲಿ ಪೊಲೀಸರಿಗೆ ಸೂಚನೆ ನೀಡಿತ್ತು.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ಎಂ.ಎಂ.ಸುಂದ್ರೇಶ್ ಅವರನ್ನೊಳಗೊಂಡ ಪೀಠ, “ಸರ್ಕಾರವು ಯಾವುದೇ ವಸ್ತುಗಳ ಮೇಲೆ ನಿಷೇಧ ಹೇರಿದಾಗ ಅದು ಸಂಪೂರ್ಣ ನಿಷೇಧ ಎಂದೇ ಅರ್ಥವಾಗಿದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಸುಪ್ರೀಂ ಕೋರ್ಟ್‌ನ 2018 ರ ಆದೇಶದ ನಂತರ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಸಾಂಪ್ರದಾಯಿಕ ಪಟಾಕಿಗಳನ್ನು ನಿಷೇಧಿಸಿದ ನಂತರ ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಲಾಗಿದೆ.

You may also like

National

ರಾಮಲೀಲಾ ಮೈದಾನದಲ್ಲಿ ಜಮಾಯಿಸುತ್ತಿರುವ ರೈತರು

ನವದೆಹಲಿ : ದೇಶದ ಬೇರೆ ಬೇರೆ ರಾಜ್ಯಗಳಿಂದ ರೈತರು ಇಂದು ದೆಹಲಿಯಲ್ಲಿ ಜಮಾಯಿಸುತ್ತಿದ್ದಾರೆ. ವಿವಿಧ ರೈತ ಸಂಘಟನೆಗಳ ಯುನೈಟೆಡ್ ಕಿಸಾನ್ ಮೋರ್ಚಾ (ಎಸ್‌ಕೆಎಂ) ಕೃಷಿ ಉತ್ಪನ್ನಗಳ ಕನಿಷ್ಠ
Just In Sports

ಹೋರಾಡಿ ಸೋತ ರಾಜಸ್ಥಾನ್ (Rajasthan) – ಸತತ ಎರಡನೇ ಜಯ ದಾಖಲಿಸಿದ ಪಂಜಾಬ್ (Punjab)

Guwahati: ನಾಯಕ ಶಿಖರ್‌ ಧವನ್‌ (Shikhar Dhawan), ಪ್ರಭ್‌ಸಿಮ್ರಾನ್‌ ಸಿಂಗ್‌ (Prabhsimran Singh) ಬ್ಯಾಟಿಂಗ್ ಹಾಗೂ ನಾಥನ್ ಎಲ್ಲಿಸ್ ಬೌಲಿಂಗ್‌ ದಾಳಿಯಿಂದಾಗಿ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ