ಭಾರತ ಹಾಗೂ ಕೆನಡಾ (India vs Canada) ನಡುವೆ ಉದ್ವಿಗ್ನತೆ ಕ್ಷಣದಿಂದ ಕ್ಷಣಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ (Anand Mahindra) ಮಹತ್ವದ ನಿರ್ಧಾರವೊಂದನ್ನು ಕೈಗೊಂಡು ಕೆನಡಾಗೆ ಶಾಕ್ ಕೊಟ್ಟಿದ್ದಾರೆ.
ಮಹೀಂದ್ರಾ ಮತ್ತು ಮಹೀಂದ್ರಾದ (Mahindra and Mahindra) ಅಂಗಸಂಸ್ಥೆಯಾದ ರೇಸನ್ ಏರೋಸ್ಪೇಸ್ ಕಾರ್ಪೊರೇಷನ್ ಕೆನಡಾದಲ್ಲಿ ತನ್ನ ವ್ಯವಹಾರ ಮುಚ್ಚಲು ನಿರ್ಧರಿಸಿದೆ ಎಂದು ಕಂಪನಿ ಭಾರತೀಯ ಷೇರು ಮಾರುಕಟ್ಟೆಗೆ ಹೇಳಿದೆ.
ಮಹೀಂದ್ರಾ ಮತ್ತು ಮಹೀಂದ್ರಾ ಕಂಪನಿಯಲ್ಲಿ ಶೇ. 11.18 ಪಾಲು ಹೊಂದಿತ್ತು. ಸೆಪ್ಟೆಂಬರ್ 20, 2023 ರಂದು ಕಾರ್ಯಾಚರಣೆಯನ್ನು ಮುಚ್ಚಲು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸ್ವೀಕರಿಸಿರುವುದಾಗಿ ಸ್ಟಾಕ್ ಮಾರ್ಕೆಟ್‌ಗೆ ಎಂ ಅಂಡ್ ಎಂ ಹೇಳಿದೆ. ಕಾರ್ಪೊರೇಷನ್ ಕೆನಡಾದಿಂದ ವಿಸರ್ಜನೆಯ ಪ್ರಮಾಣಪತ್ರವನ್ನು ಸಂಸ್ಥೆ ಸ್ವೀಕರಿಸಿದೆ ಎಂದು ಸ್ಟಾಕ್ ಎಕ್ಸ್ಚೇಂಜ್ಗೆ ಹೇಳಿದೆ. ಈ ಮೂಲಕ ಕಂಪನಿಯು ಸುಮಾರು 28.7 ಕೋಟಿ ರೂ. ಪಡೆಯುತ್ತದೆ ಎಂದು ವರದಿ ಹೇಳಿದೆ. ಈ ಸುದ್ದಿಯ ನಂತರ ಮಹೀಂದ್ರಾ ಮತ್ತು ಮಹೀಂದ್ರಾ ಷೇರುಗಳು ತೀವ್ರವಾಗಿ ಕುಸಿತ ಕಂಡಿವೆ.