Kornersite

Just In National Tech

ಚಂದ್ರನಲ್ಲಿ ಮತ್ತೆ ಬೆಳಕು ಚೆಲ್ಲುತ್ತಿರುವ ಸೂರ್ಯ; ಕಾರ್ಯಾರಂಭ ಮಾಡಲಿವೆಯೇ ವಿಕ್ರಂ, ರೋವರ್?

ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದು 12 ದಿನಗಳ ಕಾಲ ಕಾರ್ಯ ನಿರ್ವಹಿಸಿ ನಿದ್ರೆಗೆ ಜಾರಿದ್ದ ವಿಕ್ರಂ ಲ್ಯಾಂಡರ್‌ ಹಾಗೂ ಪ್ರಜ್ಞಾನ್‌ ರೋವರ್‌ ಮತ್ತೆ ಇಂದು ಕಾರ್ಯಾಚರಣೆ ನಡೆಸಲಿವೆ. ಒಂದು ವೇಳೆ ಈ ಕಾರ್ಯ ಇಸ್ರೋ ವಿಜ್ಞಾನಿಗಳಿಂದ ಯಶಸ್ವಿಯಾದರೆ ಮತ್ತೆ 14 ದಿನಗಳ ಕಾಲ ಇವು ಕಾರ್ಯ ನಿರ್ವಹಿಸಲಿವೆ.

ಚಂದ್ರನ ಮೇಲಿನ ರಾತ್ರಿ ಸಮಯ ಸೆ.21ಕ್ಕೆ ಮುಕ್ತಾಯವಾಗಿದೆ. ಹೀಗಾಗಿ ಇಂದು ಅಲ್ಲಿ ಸೂರ್ಯ ಉದಯವಾಗಲಿದೆ. ಹೀಗಾಗಿ ಲ್ಯಾಂಡರ್‌ (Vikram lander) ಮತ್ತು ರೋವರ್‌ಗಳು (Pragyan rover) ಮತ್ತೆ ಕಾರ್ಯನಿರ್ವಹಿಸಲು ಆರಂಭಿಸಿದರೆ ಇದು ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆಯಾಗಲಿದೆ.

ಅಲ್ಲದೇ ಚಂದ್ರನ ಮೇಲೆ ಮತ್ತಷ್ಟು ಸಂಶೋಧನೆಗಳನ್ನು ಕೈಗೊಳ್ಳಲು ಇದು ನೆರವು ನೀಡಲಿದೆ. ಚಂದ್ರನ ಮೇಲೆ 1 ಹಗಲಿನಲ್ಲಿ ಅಂದರೆ, ಭೂಮಿಯ 14 ದಿನ ಕೆಲಸ ಮಾಡುವುದಕ್ಕಾಗಿ ಲ್ಯಾಂಡರ್‌ ಮತ್ತು ರೋವರ್‌ಗಳನ್ನು ಕಳುಹಿಸಲಾಗಿತ್ತು. ಆದರೆ ಇವುಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ ಕಾರಣ 2 ದಿನ ಮೊದಲೇ ಇವುಗಳನ್ನು ಸ್ಲೀಪ್‌ ಮೋಡ್‌ ಗೆ ಕಳುಹಿಸಲಾಗಿತ್ತು.

ಚಂದ್ರನಲ್ಲಿ ಸೂರ್ಯನ ಬೆಳಕು ಇಲ್ಲದ ಸಮಯದಲ್ಲಿ ಉಷ್ಣಾಂಶ ಮೈನಸ್‌ 240 ಡಿಗ್ರಿವರೆಗೂ ಇರುತ್ತದೆ. ಹೀಗಾಗಿ ಈ ಉಷ್ಣಾಂಶದಲ್ಲಿ ಯಾವುದೇ ಎಲೆಕ್ಟ್ರಾನಿಕ್‌ ಉಪಕರಣಗಳು ಉಳಿಯುವುದು ಅನುಮಾನ. ಹೀಗಾಗಿ ಈ ಪ್ರಯೋಗದ ಮೇಲೆ ಎಲ್ಲ ದೇಶಗಳ ಬಾಹ್ಯಾಕಾಶ ಸಂಸ್ಥೆಗಳು ಕಾತುರದಿಂದ ಕಾಯುತ್ತಿವೆ.

You may also like

National

ರಾಮಲೀಲಾ ಮೈದಾನದಲ್ಲಿ ಜಮಾಯಿಸುತ್ತಿರುವ ರೈತರು

ನವದೆಹಲಿ : ದೇಶದ ಬೇರೆ ಬೇರೆ ರಾಜ್ಯಗಳಿಂದ ರೈತರು ಇಂದು ದೆಹಲಿಯಲ್ಲಿ ಜಮಾಯಿಸುತ್ತಿದ್ದಾರೆ. ವಿವಿಧ ರೈತ ಸಂಘಟನೆಗಳ ಯುನೈಟೆಡ್ ಕಿಸಾನ್ ಮೋರ್ಚಾ (ಎಸ್‌ಕೆಎಂ) ಕೃಷಿ ಉತ್ಪನ್ನಗಳ ಕನಿಷ್ಠ
International Tech

ಹಾರಿ ಹೋದ ನೀಲಿ ಹಕ್ಕಿ- ಜಾಗ ತುಂಬಿದ ನಾಯಿ

Washington : ಟ್ವಿಟ್ಟರ್ ಸಿಇಓ ಎಲಾನಾ ಮಸ್ಕ್ ಟ್ವಿಟ್ಟರ್ ಖರೀದಿಸಿದಾಗಿನಿಂದ ಹೆಚ್ಚು ಸುದ್ದಿಯಾಗುತ್ತಲೇ ಇದ್ದಾರೆ. ಸದ್ಯ ಲೋಗೋದಿಂದ ನೀಲಿ ಹಕ್ಕಿ ತೆಗೆದು ನಾಯಿ ಚಿತ್ರ ಹಾಕಿದ್ದು, ದೊಡ್ಡ