ನಾಯಿ ಎಂದ ಕೂಡಲೇ ಎಲ್ಲರೂ ಹೇಳುವುದು ಬೊಗಳುವುದು. ಆದರೆ, ಇಲ್ಲಿ ನಾಯಿಯೊಂದು ಹಾಡುತ್ತದೆ ಎಂದರೆ ನೀವು ನಂಬಲೇಬೇಕು.
ತಮಿಳುನಾಡಿನ ವಿರುದುನಗರ ಜಿಲ್ಲೆಯ ಶಿವಕಾಶಿಯಲ್ಲಿ ನಟ ಮಾಧವನ್ ಅಭಿನಯದ ಮಾರ ಚಿತ್ರದ ‘ಯಾರ ತಾವತು’ ಹಾಡಿನ ಮಾಧುರ್ಯಕ್ಕೆ ಈ ನಾಯಿ ಕೂಡ ಸೋತಿದೆ. ಟಾಮಿ ಎಂಬ ನಾಯಿಯೇ ಈಗ ಪ್ರಸಿದ್ಧಿಯಾಗಿದೆ.
ಟಾಮಿಯ ಮಾಲೀಕ ಅಮರೀಶ್ ಮತ್ತು ಮನೆಯವರು ನಾಯಿ ಊಳಿಡುವುದನ್ನು ಕಂಡು ಹೆದರಿದ್ದರು. 2 ವರ್ಷಗಳ ಹಿಂದೆ ಅಮರೀಶ್ ಮೊಬೈಲ್ ರಿಂಗ್ ಟೋನ್ ಆಗಿ ಈ ಹಾಡನ್ನು ಬಳಸುತ್ತಿದ್ದರು. ಫೋನ್ ರಿಂಗ್ ಆದಾಗೆಲ್ಲ ಈ ಹಾಡು ಗುನುಗುತ್ತಿತ್ತು. ಆಗ ನಾಯಿಯು ಈ ಹಾಡನ್ನು ಆಲಿಸುತ್ತಿತ್ತು. ನಂತರ ‘ಯಾರ ತಾವತು’ ಹಾಡು ಪ್ರಸಾರವಾದಾಗೆಲ್ಲ ಟಾಮಿ ಸಹ ಧ್ವನಿಗೂಡಿಸಲು ಆರಂಭಿಸಿತು! ಹಾಡು ಬಂದಾಗೆಲ್ಲ ತಾನೂ ಹಾಡಲು ಶುರುಮಾಡತೊಡಗಿತು. ಸದ್ಯ ಇದನ್ನು ಕಂಡು ಜನರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.