ಚಂಡೀಗಢ : ಕುಟುಂಬಸ್ಥರನ್ನು ಕಟ್ಟಿ ಹಾಕಿ ಮೂವರು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿರುವ ಭಯಾನಕ ಕೃತ್ಯವೊಂದು ಬೆಳಕಿಗೆ ಬಂದಿದೆ.
ಈ ಘಟನೆ ಹರಿಯಾಣ (Hariyana)ದ ಪಾಣಿಪತ್‍ನಲ್ಲಿ ನಡೆದಿದೆ. ಅಪರಿಚಿತ ಆರೋಪಿಗಳು, ಚಾಕು ಹಾಗೂ ಹರಿತವಾದ ಆಯುಧಗಳನ್ನು ಹಿಡಿದು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಗಳು ನಾಲ್ವರು ಕುಟುಂಬಗಳು ವಾಸಿಸುತ್ತಿದ್ದ ಮನೆಗೆ ನುಗ್ಗಿದ್ದಾರೆ. ನಂತರ ಅಲ್ಲಿಯ ಮೂವರು ಮಹಿಳಾ ಕಾರ್ಮಿಕರ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಈ ವೇಳೆ ಕುಟುಂಬದ ಸದಸ್ಯರನ್ನು ಹಗ್ಗಗಳಿಂದ ಕಟ್ಟಿ ಹಾಕಿದ್ದಾರೆ. ನಂತರ ಮನೆಯಲ್ಲಿದ್ದ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಇದಕ್ಕೂ ಮುನ್ನ ಅತ್ಯಾಚರ ನಡೆದ ಘಟನಾ ಸ್ಥಳದಿಂದ 1 ಕಿ.ಮೀ ದೂರದಲ್ಲಿ ಮಹಿಳೆಯ ಮೇಲೆ ದಾಳಿ ಮಾಡಿ ಆಕೆಯನ್ನು ಕೊಲೆ ಮಾಡಲಾಗಿದೆ. ಆಕೆಯ ಪತಿಯನ್ನು ದರೋಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎರಡನೇ ಘಟನೆಯಲ್ಲಿ ಅದೇ ವ್ಯಕ್ತಿಗಳು ಭಾಗಿಯಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಎರಡೂ ಪೈಶಾಚಿಕ ಕೃತ್ಯಗಳು ಒಂದೇ ಗ್ರಾಮದಲ್ಲಿ ನಡೆದಿವೆ.